ನಾನು ದಲಿತ ಸಮುದಾಯದವಳು ಎಂದು ಹೀಗೆ ನಡೆಯುತ್ತಿದೆಯೇ: ಸಂಸದೆ ರಮ್ಯಾ ಹರಿದಾಸ್

Update: 2020-03-02 14:56 GMT

ಹೊಸದಿಲ್ಲಿ,ಮಾ.2: ಬಿಜೆಪಿ ಸಂಸದೆ ಜಸ್‌ಕೌರ್ ಮೀನಾ (ರಾಜಸ್ಥಾನ) ಅವರು ಸದನದಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿರುವ ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ ಅವರು,ಈ ಬಗ್ಗೆ ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ ಕೋರಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ದಿಲ್ಲಿ ಹಿಂಸಾಚಾರದ ಕುರಿತು ತೀವ್ರ ಪ್ರತಿಭಟನೆ ನಡೆಸಿದ್ದ ಪ್ರತಿಪಕ್ಷಗಳು ಗೃಹಸಚಿವ ಅಮಿತ್‌ಶಾ ಅವರ ರಾಜೀನಾಮೆಗೆ ಆಗ್ರಹಿಸಿದ್ದವು. ಈ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಪರಸ್ಪರ ತಳ್ಳಾಟ ನಡೆದಿತ್ತು.

“ತಾನು ದಲಿತ ಸಮುದಾಯದವಳು ಮತ್ತು ಮಹಿಳೆಯಾಗಿದ್ದೇನೆಂಬ ಕಾರಣಕ್ಕೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆಯೇ” ಎಂದೂ ಹರಿದಾಸ್ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಕಳೆದ ವರ್ಷದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಸಂಬಂಧಿಸಿ ಸದನದ ಅಂಗಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹರಿದಾಸ್ ಸೇರಿದಂತೆ ತನ್ನ ಇಬ್ಬರು ಮಹಿಳಾ ಸಂಸದರ ಮೇಲೆ ಮಾರ್ಷಲ್‌ಗಳು ಕೈ ಮಾಡಿದ್ದಾರೆ ಎಂದು ಕಾಂಗ್ರೆಸ್ ಸ್ಪೀಕರ್ ಬಿರ್ಲಾ ಅವರಿಗೆ ದೂರು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News