14,000 ಅಡಿ ಎತ್ತರದಲ್ಲಿ ಸಿಕ್ಕಿಹಾಕಿಕೊಂಡಿದ್ದ 111 ಜನರನ್ನು ರಕ್ಷಿಸಿದ ಭಾರತೀಯ ಸೇನೆ

Update: 2020-03-02 15:48 GMT

ಇಟಾನಗರ,ಮಾ.2: ಭಾರೀ ಹಿಮವರ್ಷದಿಂದಾಗಿ ಅರುಣಾಚಲ ಪ್ರದೇಶದ, ಸುಮಾರು 14,000 ಅಡಿ ಎತ್ತರದ ಸೆಲಾ ಪಾಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಿಳೆಯರು ಮತ್ತು ಸಣ್ಣಮಕ್ಕಳು ಸೇರಿದಂತೆ 111 ಜನರನ್ನು ಭಾರತೀಯ ಸೇನೆಯು ರಕ್ಷಿಸಿದೆ.

ವೈದ್ಯಕೀಯ ಸಿಬ್ಬಂದಿಯೊಂದಿಗೆ ಫೆ.29ರಂದು ಸ್ಥಳಕ್ಕೆ ತಲುಪಿದ್ದ ಭಾರತೀಯ ಸೇನಾಪಡೆಯ ಎರಡು ತಂಡಗಳು ಹಗಲು-ರಾತ್ರಿ ಶ್ರಮಿಸಿ ಶೂನ್ಯಕ್ಕಿಂತ ಕಡಿಮೆ ತಾಪಮಾನದ ವಾತಾವರಣದಲ್ಲಿ ತಮ್ಮ ವಾಹನಗಳೊಂದಿಗೆ ಅತಂತ್ರರಾಗಿದ್ದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿವೆ.

ಸಕಾಲಿಕ ನೆರವಿಗಾಗಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿಗಳ ಕಚೇರಿಯು ಭಾರತೀಯ ಸೇನೆಗೆ ಧನ್ಯವಾದಗಳನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News