ತೆಲಂಗಾಣ: ಸೋಂಕು ಪೀಡಿತರ ಸಂಖ್ಯೆ 3ಕ್ಕೇರಿಕೆ

Update: 2020-03-04 15:21 GMT

ಹೊಸದಿಲ್ಲಿ,ಮಾ.4: ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿ ಸೇರಿದಂತೆ ಇಬ್ಬರು ಕೊರೋನ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು, ಇದರೊಂದಿಗೆ ಹೈದರಾದ್‌ನಲ್ಲಿ ಈ ಭೀಕರ ವೈರಸ್ ಕಾಯಿಲೆಯಿಂದ ಪೀಡಿತರಾದವರ ಸಂಖ್ಯೆ ಮೂರಕ್ಕೇರಿದೆ.

 ಹೈದರಾಬಾದ್‌ನ ಡಿಎಸ್‌ಎಂ ಶೇರ್ಡ್‌ ಸರ್ವಿಸಸ್ ಕಂಪೆನಿಯ ಉದ್ಯೋಗಿಯೊಬ್ಬರಿಗೆ ಕೊರೋನ ಪೀಡಿತರಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾದ ಬಳಿಕ ಕಂಪೆನಿಯು ನಗರದಲ್ಲಿರುವ ತನ್ನ ಎರಡು ಕ್ಯಾಂಪಸ್‌ಗಳಿಂದ ಸಿಬ್ಬಂದಿಗಳನ್ನು ತೆರವುಗೊಳಿಸಿತು.

ಇಂದು ಕೊರೋನ ವೈರಸ್ ಸೋಂಕು ಪತ್ತೆಯಾದ ಇಬ್ಬರಲ್ಲಿ ಓರ್ವ ಇತ್ತೀಚೆಗೆ ಇಟಲಿಗೆ ಪ್ರಯಾಣಿಸಿದ್ದವನಾಗಿದ್ದನು. ಇನ್ನೋರ್ವ ವ್ಯಕ್ತಿಯು ಸೋಮವಾರ ಕೊರೊನ ಸೋಂಕು ಪತ್ತೆಯಾದ 24 ವರ್ಷ ವಯಸ್ಸಿನ ಟೆಕ್ಕಿಯ ಜೊತೆ ಸಂಪರ್ಕ ಹೊಂದಿದ್ದನೆಂದು ತಿಳಿದುಬಂದಿದೆ.

ಈ ಮಧ್ಯೆ ಸೋಮವಾರ ಕೊರೋನ ವೈರಸ್ ಪತ್ತೆಯಾದ ಟೆಕ್ಕಿಯೊಂದಿಗೆೆ ಸಂಪರ್ಕಕ್ಕೆ ಬಂದಿದ್ದ 40ಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News