ಅಮೆಝಾನ್‌ನ ಅಮೆರಿಕ ಉದ್ಯೋಗಿಯಲ್ಲಿ ಸೋಂಕು
Update: 2020-03-04 20:57 IST
ವಾಶಿಂಗ್ಟನ್, ಮಾ. 4: ಅಮೆರಿಕದಲ್ಲಿರುವ ತನ್ನ ಓರ್ವ ಉದ್ಯೋಗಿಯಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾಗಿದೆ ಎಂದು ಆನ್‌ಲೈನ್ ಮಾರಾಟ ಕಂಪೆನಿ ಅಮೆಝಾನ್.ಕಾಮ್ ಇಂಕ್ ಮಂಗಳವಾರ ಖಚಿತಪಡಿಸಿದೆ.
‘‘ಸೋಂಕಿಗೆ ಒಳಗಾಗಿರುವ ಉದ್ಯೋಗಿಯನ್ನು ಈಗ ಪ್ರತ್ಯೇಕವಾಗಿಡಲಾಗಿದ್ದು, ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ’’ ಎಂದು ಕಂಪೆನಿಯ ವಕ್ತಾರರೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಟಲಿಯ ಮಿಲಾನ್ ನಗರದಲ್ಲಿರುವ ತನ್ನ ಇಬ್ಬರು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಅವರನ್ನು ಇತರರಿಂದ ಬೇರ್ಪಡಿಸಲಾಗಿದೆ ಎಂದು ಕಂಪೆನಿ ರವಿವಾರ ಹೇಳಿತ್ತು.