ಡೆಮಾಕ್ರಟಿಕ್ ಅಭ್ಯರ್ಥಿ ಚುನಾವಣೆಯಲ್ಲಿ ಜೋ ಬೈಡನ್‌ಗೆ ಮುನ್ನಡೆ

Update: 2020-03-04 15:32 GMT

ಬರ್ಲಿಂಗ್ಟನ್, ಮಾ. 4: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದಿಂದ ಯಾರು ಎದುರಿಸಬೇಕು ಎನ್ನುವುದನ್ನು ನಿರ್ಧರಿಸಲು ಮಂಗಳವಾರ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷ ಜೋ ಬೈಡನ್ ಏಳು ರಾಜ್ಯಗಳಲ್ಲಿ ವಿಜಯ ಗಳಿಸಿದ್ದಾರೆ.

ಈವರೆಗೂ ಡೆಮಾಕ್ರಟಿಕ್ ಅಭ್ಯರ್ಥಿತ್ವಕ್ಕೆ ಪ್ರಬಲ ದಾವೇದಾರನಾಗಿದ್ದ ಬರ್ನೀ ಸ್ಯಾಂಡರ್ಸ್ ಹಿನ್ನಡೆ ಅನುಭವಿಸಿದ್ದಾರೆ.

14 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ವರ್ಜೀನಿಯ, ನಾರ್ತ್ ಕ್ಯಾರಲೈನ, ಅಲಬಾಮ, ಓಕ್ಲಹೋಮ, ಟೆನೆಸೀ, ಅರ್ಖಾನ್ಸಸ್ ಮತ್ತು ಮಿನಸೋಟ ಒಳಗೊಂಡ ಏಳು ರಾಜ್ಯಗಳಲ್ಲಿ ಜೋ ಬೈಡನ್ ಮುನ್ನಡೆ ಕಂಡಿದ್ದಾರೆ.

ಸ್ಯಾಂಡರ್ಸ್ ತವರು ರಾಜ್ಯ ವರ್ಮೊಂಟ್, ಕೊಲರಾಡೊ, ಉಟಾ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News