ಕೊರೋನವೈರಸ್ ಎದುರಿಸಲು ವಿಶ್ವಬ್ಯಾಂಕ್‌ನಿಂದ 12 ಬಿಲಿಯ ಡಾಲರ್

Update: 2020-03-04 16:23 GMT

ವಾಶಿಂಗ್ಟನ್, ಮಾ. 4: ಕೊರೋನವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶಗಳಿಗೆ ನಿಧಿ ಪೂರೈಸುವುದಕ್ಕಾಗಿ ವಿಶ್ವಬ್ಯಾಂಕ್ ಮಂಗಳವಾರ 12 ಬಿಲಿಯ ಡಾಲರ್ (ಸುಮಾರು 88,000 ಕೋಟಿ ರೂಪಾಯಿ) ನೆರವು ಪ್ಯಾಕೇಜ್ ಘೋಷಿಸಿದೆ.

‘‘ದೇಶಗಳ ಅಗತ್ಯಗಳಿಗೆ ಸ್ಪಂದಿಸುವ ವೇಗದ ಹಾಗೂ ಪರಿಣಾಮಕಾರಿ ನೆರವನ್ನು ಒದಗಿಸುವುದು ಇದರ ಉದ್ದೇಶವಾಗಿದೆ’’ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಸುದ್ದಿಗಾರರಿಗೆ ತಿಳಿಸಿದರು.

ಕೋವಿಡ್-19 ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಸಿದ್ಧವಾಗಿಲ್ಲದ ಬಡ ದೇಶಗಳ ಮೇಲಿನ ಹೆಚ್ಚುವರಿ ಹೊರೆಯನ್ನು ಗುರುತಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು.

ವೈದ್ಯಕೀಯ ಸಲಕರಣೆಗಳು ಅಥವಾ ಆರೋಗ್ಯ ಸೇವೆಗಳಿಗೆ ಈ ಹಣವನ್ನು ಬಳಸಬಹುದಾಗಿದೆ ಎಂದು ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಪರಿಣತಿ ಪಡೆಯಲು ಹಾಗೂ ನೀತಿ ಕುರಿತು ಸಲಹೆ ಪಡೆಯುವುದಕ್ಕಾಗಿಯೂ ಹಣವನ್ನು ಉಪಯೋಗಿಸಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News