ಫ್ಲೂಗಿಂತ ಕೊರೋನವೈರಸ್ ಹರಡುವುದು ನಿಧಾನ, ಆದರೆ ಹೆಚ್ಚು ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ

Update: 2020-03-04 16:43 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 4: ನೂತನ-ಕೊರೋನವೈರಸ್ ಸೋಂಕು ಇನ್‌ಫ್ಲುಯೆಂಝ ಅಥವಾ ಫ್ಲೂ (ಜ್ವರ) ವೈರಸ್‌ಗಿಂತ ನಿಧಾನವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ತಿಳಿಸಿದೆ.

ಆದರೆ, ಕೊರೋನವೈರಸ್‌ನಿಂದ ಹುಟ್ಟುವ ಕಾಯಿಲೆಯು ಫ್ಲೂಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಅದು ಹೇಳಿದೆ.

 ‘‘ಕೋವಿಡ್-19 (ನೋವೆಲ್-ಕೊರೋನವೈರಸ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಇಟ್ಟ ಅಧಿಕೃತ ಹೆಸರು) ಫ್ಲೂಗಿಂತ ನಿಧಾನವಾಗಿ ಹರಡುತ್ತದೆ. ಕಾಯಿಲೆಗೆ ಒಳಗಾಗದ ಜನರಿಂದ ಕೊರೋನವೈರಸ್ ಹರಡುವುದು ಕಂಡುಬಂದಿಲ್ಲ. ಆದರೆ ಫ್ಲೂ ಜ್ವರದಲ್ಲಿ ಸೋಂಕಿಗೆ ಒಳಗಾದ, ಆದರೆ ಇನ್ನೂ ಕಾಯಿಲೆಗೆ ಒಳಗಾಗದ ಜನರೂ ರೋಗವನ್ನು ಹರಡುತ್ತಾರೆ’’ ಎಂದು ಮಂಗಳವಾರ ನೀಡಿದ ಮಾಧ್ಯಮ ಪ್ರಕಟನೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅದನಾಮ್ ಗೆಬ್ರಿಯೇಸಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News