×
Ad

ಕೇಂದ್ರ ಸಚಿವನಾಗಿ ಇದು ತನ್ನ ವೈಫಲ್ಯ ಎಂದ ನಿತಿನ್ ಗಡ್ಕರಿ!

Update: 2020-03-06 20:52 IST

ಹೊಸದಿಲ್ಲಿ, ಮಾ. 6: ದೇಶಾದ್ಯಂತ ರಸ್ತೆ ಅಪಘಾತ ಹಾಗೂ ಸಾವುಗಳ ಸಂಖ್ಯೆ ಕಡಿಮೆ ಮಾಡಲು ಅಸಮರ್ಥನಾಗಿರುವುದು ಕಳೆದ ಐದು ವರ್ಷಗಳಲ್ಲಿ ತನ್ನ ಅತಿ ದೊಡ್ಡ ವಿಫಲತೆಗಳಲ್ಲಿ ಒಂದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ.

 ಮುಂಬೈಯಲ್ಲಿ ಗುರುವಾರ ನಡೆದ ‘ಮಿಂಟ್ ಐಡಿಯಾ ಇನ್‌ವೆಸ್ಟ್‌ಮೆಂಟ್ ಆ್ಯಂಡ್ ಅವಾರ್ಡ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಖ್ಯೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇಳಿಕೆಯಾದರೂ ಪರಿಸ್ಥಿತಿ ಶೋಚನೀಯವಾಗಿದೆ ಎಂದರು. ಪ್ರಸ್ತುತ ಪರಿಸ್ಥಿತಿ ಶೋಚನೀಯವಾಗಿದೆ. ನಾವು ಪ್ರತಿವರ್ಷ 5 ಲಕ್ಷ ಅಪಘಾತಗಳು ಹಾಗೂ 1.5 ಲಕ್ಷ ಸಾವುಗಳನ್ನು ನೋಡಿದ್ದೇವೆ. ಮೊದಲ ಬಾರಿಗೆ ಕಳೆದ 3 ತಿಂಗಳುಗಳಲ್ಲಿ ಅಪಘಾತ ಹಾಗೂ ಸಾವುಗಳ ಶೇಕಡವಾರು ಪ್ರಮಾಣ ಇಳಿಕೆಯಾಗಿದೆ ಎಂದು ಅವರು ಹೇಳಿದರು. “ನನ್ನ ಇಲಾಖೆಯಲ್ಲಿ ಎಲ್ಲವೂ ಉತ್ತಮವಾಗಿದೆ. ಆದರೆ, ಒಂದು ಅತಿ ದೊಡ್ಡ ವಿಫಲತೆ ಉಂಟಾಗಿದೆ. ಅದು ಕಳೆದ 5 ವರ್ಷಗಳಿಂದ ನಾವು ಅಪಘಾತ ಹಾಗೂ ಸಾವನ್ನು ಕಡಿಮೆ ಮಾಡುವುದರಲ್ಲಿ ವಿಫಲನಾಗಿರುವುದು. ಈ ಅಪಘಾತಗಳಿಂದ ನಾವು ಶೇ. 2 ಜಿಡಿಪಿಯನ್ನು ಕಳೆದುಕೊಂಡಿದ್ದೇವೆ” ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News