ಸ್ವಚ್ಛ ವಾಯು ಯೋಜನೆಗೆ 200 ಕೋಟಿ ರೂ. ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸು

Update: 2020-03-06 16:59 GMT
ಫೈಲ್ ಚಿತ್ರ

ಹೊಸದಿಲ್ಲಿ,ಮಾ.6: ಕೇಂದ್ರ ಸರಕಾರವು ನಡೆಸುತ್ತಿರುವ ರಾಷ್ಟ್ರೀಯ ಪರಿಶುದ್ಧ ವಾಯು ಕಾರ್ಯಕ್ರಮಕ್ಕೆ 200 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಲು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ‘ಅತ್ಯುನ್ನತ ಆದ್ಯತೆ’ಯನ್ನು ನೀಡಬೇಕೆಂದು ಅದು ಹೇಳಿದೆ.

ಕೇಂದ್ರ ಸಚಿವ ಜೈರಾಮ್ ರಮೇಶ್ ನೇತೃತ್ವದ, ವಿಜ್ಞಾನ ಹಾಗೂ ತಂತ್ರಜ್ಞಾನ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ರಾಜ್ಯಸಭೆಯಲ್ಲಿ ಮಂಡಿಸಿದ 331ನೇ ವರದಿಯಲ್ಲಿ ಪರಿಶುದ್ಧ ವಾಯು ಕ್ರಮಕ್ಕೆ ಅನುದಾನ ಹೆಚ್ಚಿಸುವ ಶಿಫಾರಸು ಮಾಡಿದೆ.

 ಕೇಂದ್ರದ ರಾಷ್ಟ್ರೀಯ ಕರಾವಳಿ ಮಿಶನ್ (ಎನ್‌ಸಿಎಂ) ಹಾಗೂ ಮಾಲಿನ್ಯ ನಿಯಂತ್ರಣ ಯೋಜನೆಗಳಡಿ ನೀಡಲಾಗಿರುವ ನಿಧಿಯಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿರುವ ಸಮಿತಿಯು, ಈ ಎರಡೂ ಕಾರ್ಯಕ್ರಮಗಳಿಗೂ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮಕ್ಕೆ ಪ್ರಸಕ್ತ ಸನ್ನಿವೇದ ದೃಷ್ಟಿಯಿಂದ ಅತ್ಯಧಿಕ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News