×
Ad

ಇಡೀ ಜಗತ್ತು ಕೈಕುಲುಕುವ ಬದಲು 'ನಮಸ್ತೆ' ಎನ್ನುತ್ತಿದೆ: ಕೊರೊನಾವೈರಸ್ ಬಗ್ಗೆ ಪ್ರಧಾನಿ ಮೋದಿ

Update: 2020-03-07 14:19 IST

ಹೊಸದಿಲ್ಲಿ: ಕೊರೊನಾವೈರಸ್ ಕುರಿತ ವದಂತಿಗಳಿಂದ ಜನರು ದೂರವಿರಬೇಕು ಮತ್ತು ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜನರು ಕೈಕುಲುವುದನ್ನು ಕಡಿಮೆಗೊಳಿಸಿ, 'ನಮಸ್ತೆ' ಎನ್ನಬೇಕು ಎಂದವರು ಇದೇ ಸಂದರ್ಭ ಅವರು ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಜನ ಔಷಧಿ ಕೇಂದ್ರಗಳು ಮತ್ತು ಫಲಾನುಭವಿಗಳ ಜೊತೆ ಮಾತುಕತೆ ನಡೆಸಿದರು.

"ಇಡೀ ವಿಶ್ವವೇ ಇದೀಗ ನಮಸ್ತೆ ಎನ್ನುತ್ತಿದೆ. ಕೆಲವು ಕಾರಣಗಳಿಗಾಗಿ ನಾವು ಈ ಅಭ್ಯಾಸವನ್ನು ಮರೆತಿದ್ದೆವು. ಮತ್ತೊಮ್ಮೆ ಈ ಅಭ್ಯಾಸವನ್ನು ನಾವು ಆರಂಭಿಸಲು ಇದು ಸರಿಯಾದ ಸಮಯ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News