ತೊರೆದದ್ದು ಬಿಜೆಪಿಯನ್ನು ಹೊರತು ಹಿಂದುತ್ವವನ್ನಲ್ಲ: ಉದ್ದವ್ ಠಾಕ್ರೆ

Update: 2020-03-07 10:50 GMT

ಲಕ್ನೋ, ಮಾ.7: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಸರಕಾರ 1 ಕೋ.ರೂ. ನೆರವು ನೀಡಲಿದೆ ಎಂದು ಘೋಷಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಜೆಪಿಯಿಂದ ಬೇರ್ಪಟ್ಟರೂ, ಹಿಂದುತ್ವವನ್ನು ಬಿಟ್ಟಿಲ್ಲ ಎಂದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್ ಮಹಾ ಮೈತ್ರಿಕೂಟದ ಸರಕಾರದ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಶನಿವಾರ ಅಯೋಧ್ಯೆಗೆ ಭೇಟಿ ನೀಡಿದ ಠಾಕ್ರೆ,‘‘ಬಿಜೆಪಿ ಎಂದರೆ ಹಿಂದುತ್ವವಲ್ಲ. ಹಿಂದುತ್ವ ಒಂದು ವಿಭಿನ್ನ ವಿಚಾರ. ನಮಗಿಂತ ವಿಭಿನ್ನ ಸಿದ್ದಾಂತವಿರುವ ಕಾಂಗ್ರೆಸ್-ಎನ್‌ಸಿಪಿಯೊಂದಿಗೆ ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ರಚಿಸಿದ್ದರೂ ನನ್ನ ಪಕ್ಷ ಹಿಂದುತ್ವದಿಂದ ಬೇರ್ಪಟ್ಟಿಲ್ಲ’’ ಎಂದರು.

ಕೊರೋನ ವೈರಸ್ ಭೀತಿಯಿಂದಾಗಿ ಅಯೋಧ್ಯೆಯಲ್ಲಿ ನಡೆಸಲುದ್ದೇಶಿಸಿದ್ದ ಆರತಿ ಕಾರ್ಯಕ್ರಮವನ್ನು ಠಾಕ್ರೆ ರದ್ದುಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News