ಈ.ಡಿ.ಯಿಂದ ಯೆಸ್ ಬ್ಯಾಂಕ್ ಸ್ಥಾಪಕನ ವಿಚಾರಣೆ

Update: 2020-03-07 14:23 GMT

ಹೊಸದಿಲ್ಲಿ/ಮುಂಬೈ, ಮಾ. 7: ಯೆಸ್ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ದಕ್ಷಿಣ ಮುಂಬೈಯಲ್ಲಿರುವ ಬಲ್ಲಾರ್ಡ್ ಪಿಯರ್‌ನಲ್ಲಿರುವ ತನ್ನ ಕಚೇರಿಗೆ ಶನಿವಾರ ಬೆಳಗ್ಗೆ ಕರೆದೊಯ್ದು ವಿಚಾರಣೆ ನಡೆಸಿದೆ.

 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯೆಸ್ ಬ್ಯಾಂಕ್ ಅನ್ನು ಸ್ತಂಭನಗೊಳಿಸಿದ ಹಾಗೂ ಎಪ್ರಿಲ್ 3ರ ವರೆಗೆ ಠೇವಣಿದಾರರಿಗೆ ಖಾತೆಯಿಂದ ಹಣ ತೆಗೆಯುವ ಮಿತಿಯನ್ನು 50 ಸಾವಿರ ರೂಪಾಯಿಗೆ ಇಳಿಸಿದ ಬಳಿಕ ಜಾರಿ ನಿರ್ದೇಶನಾಲಯ ರಾಣಾ ಕಪೂರ್ ಅವರ ನಿವಾಸದ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿತ್ತು ಹಾಗೂ ಶೋಧ ಕಾರ್ಯಾಚರಣೆ ನಡೆಸಿತ್ತು.

ರಾಣಾ ಕಪೂರ್ ಅವರ ನಿವಾಸ ಹಾಗೂ ಕಚೇರಿಯಿಂದ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಸಾಲ ನೀಡಲು ಹತ್ತಿರದ ಸಂಬಂಧಿಕರಿಂದ ಲಂಚ ಸ್ವೀಕರಿಸಿದ ಬಗ್ಗೆ ತನಿಖಾ ಏಜೆನ್ಸಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. 79 ಬೇನಾಮಿ ಕಂಪೆನಿಗಳು ಹಾಗೂ 1 ಲಕ್ಷ ನಕಲಿ ಗ್ರಾಹಕರ ನೆರವಿನಿಂದ ಸುಮಾರು 13,000 ಕೋಟಿ ರೂಪಾಯಿ ವಂಚಿಸಿದ ಆರೋಪಕ್ಕೆ ಒಳಗಾದ ಡಿಎಚ್‌ಎಫ್‌ಎಲ್ ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆಯನ್ನು ಕೂಡ ಜಾರಿ ನಿರ್ದೇಶನಾಲಯ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News