ಮೋದಿ ಆಡಳಿತದಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಪ್ರಕರಣ ಸಂಭವಿಸಿಲ್ಲ: ಪ್ರಕಾಶ್ ಜಾವಡೇಕರ್

Update: 2020-03-07 17:20 GMT

ಹೊಸದಿಲ್ಲಿ: ಕಳೆದ 6 ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಬಾಂಬ್ ಸ್ಫೋಟ ಪ್ರಕರಣಗಳು ಸಂಭವಿಸಿಲ್ಲ. ನರೇಂದ್ರ ಮೋದಿ ಸರಕಾರ ಕೈಗೊಂಡ ಕಠಿಣ ಭದ್ರತಾ ಕ್ರಮಗಳೇ ಇದಕ್ಕೆ ಕಾರಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಹಲವು ಯೋಜನೆಗಳನ್ನು ಉಲ್ಲೇಖಿಸಿ, ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡುವುದು ಪ್ರಧಾನಿ ಮೋದಿಯವರ 'ಮಂತ್ರ'ವಾಗಿದೆ ಎಂದರು.

"10-25 ವರ್ಷಗಳ ಕಾಲ ನಾವು ಅನುಭವಿಸಿದ್ದೇನು? ಪುಣೆ, ವಡೋದರ, ಅಹ್ಮದ್ ನಗರ್, ದಿಲ್ಲಿ ಮತ್ತು ಮುಂಬೈಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸುತ್ತಿದ್ದವು. 8ರಿಂದ 10 ದಿನಗಳಿಗೊಮ್ಮೆ ಸ್ಫೋಟಗಳು ಸಂಭವಿಸುತ್ತಿದ್ದು, ಜನರು ಸಾಯುತ್ತಿದ್ದರು. ಆದರೆ  ಕಳೆದ 6 ವರ್ಷಗಳಲ್ಲಿ ಒಂದೇ ಒಂದು ಸ್ಫೋಟವೂ ಸಂಭವಿಸಿಲ್ಲ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News