ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಕ್ಸರ್ ಅಮಿತ್

Update: 2020-03-07 18:07 GMT

ಅಮ್ಮಾನ್(ಜೋರ್ಡಾನ್), ಮಾ.7: ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಾಂಘಾಲ್(52ಕೆಜಿ)ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಮಂಗೋಲಿಯದ ಎಂಖ್ಮಾನಡಾಕ್ ಖಾರ್ಖು ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವುದರಿಂದ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ. 23ರ ಹರೆಯದ ಅಗ್ರ ಶ್ರೇಯಾಂಕದ ಅಮಿತ್ ಕಳೆದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭಾರತದ ಮೊದಲ ಬಾಕ್ಸರ್ ಆಗಿದ್ದಾರೆ. ಹಾಲಿ ಏಶ್ಯನ್ ಗೇಮ್ಸ್ ಹಾಗೂ ಏಶ್ಯನ್ ಚಾಂಪಿಯನ್ ಅಮಿತ್ ಆಕ್ರಮಣಕಾರಿ ಬಾಕ್ಸರ್ ಖಾರ್ಖು ಅವರನ್ನು ಸೋಲಿಸಿ ಗಮನ ಸೆಳೆದರು. ಮೊದಲೆರಡು ಸುತ್ತಿನಲ್ಲಿ ಪಾಂಘಾಲ್ ಪರಿಣಾಮಕಾರಿ ಪ್ರದರ್ಶನ ನೀಡಿದರು. ಮಂಗೋಲಿಯದ ಬಾಕ್ಸರ್ ಕೊನೆಯ ಮೂರು ನಿಮಿಷಗಳಲ್ಲಿ ಒತ್ತಡಕ್ಕೆ ಸಿಲುಕಿದರು. ಅಂತಿಮವಾಗಿ ವೀರೋಚಿತ ಸೋಲುಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News