ಆಕಾಶದಿಂದ ಮಳೆ ಜತೆ ಬಿದ್ದ ಬೆಂಕಿಯುಂಡೆ !

Update: 2020-03-08 05:25 GMT
ಸಾಂದರ್ಭಿಕ ಚಿತ್ರ

ಗಾಝಿಯಾಬಾದ್ : ಇಲ್ಲಿನ ರೈಲು ನಿಲ್ದಾಣದ ಬಳಿ ಆಗಸದಿಂದ ಮಳೆ ಜತೆ ಬೆಂಕಿಯುಂಡೆಯಂಥ ವಸ್ತುವೊಂದು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ವಸ್ತುವಿನಲ್ಲಿ ಸೋಡಿಯಂ ಅಂಶ ಇರುವುದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿದೆ.

ಅಗ್ನಿಶಾಮಕ ದಳ ಅಧಿಕಾರಿಗಳ ಪ್ರಕಾರ, "ಉಲ್ಕಾಶಿಲೆಯಂಥ ವಸ್ತು ಬಿದ್ದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ಭಾರಿ ಮಳೆಯ ಜತೆ ದೊಡ್ಡ ಸಿಡಿಲಿನಂಥ ಶಬ್ದದೊಂದಿಗೆ ಈ ವಸ್ತು ಬಿದ್ದಿತ್ತು" ಬೆಂಕಿಯನ್ನು ನಂದಿಸಿದ ಬಳಿಕ ಕೂಡಾ ಹೊಗೆಯಾಡುತ್ತಿತ್ತು ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.

ಈ ಅಪರೂಪದ ಘಟನೆ ಬಳಿಕ ಭೂಗೋಳಶಾಸ್ತ್ರ ತಜ್ಞ ಎಸ್.ಸಿ.ಶರ್ಮಾ, ವಿಜ್ಞಾನ ಸಂಯೋಜಕ ವಿವೇಕ್ ಅವರು ಸ್ಥಳಕ್ಕೆ ಭೇಟಿ ನೀಡಿ ವಸ್ತುವನ್ನು ಪರಿಶೀಲಿಸಿದ್ದಾರೆ ಎಂಧು ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ಹೇಳಿದ್ದಾರೆ.

ಆಕಾಶದಿಂದ ಬಿದ್ದ ವಸ್ತು ಸೋಡಿಯಂ ಆಗಿರಬೇಕು. ನೀರಿನೊಂದಿಗೆ ಸಂಪರ್ಕ ಸಾಧಿಸಿದ ಹಿನ್ನೆಲೆಯಲ್ಲಿ ಬೆಂಕಿಯಾಗಿ ಮಾರ್ಪಟ್ಟಿರಬೇಕು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಇದರ ಮಾದರಿಯನ್ನು ಲಕ್ನೋಗೆ ಕಳುಹಿಸಿಕೊಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News