ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ 19ಕ್ಕೇರಿಕೆ
ವಾಷಿಂಗ್ಟನ್, ಮಾ.8: ಮಾರಣಾಂತಿಕ ಕೊರೋನ ವೈರಸ್‌ಗೆ ಇನ್ನಿಬ್ಬರು ಬಲಿಯಾಗಿದ್ದಾರೆ ಎಂದು ವಾಷಿಂಗ್ಟನ್ ಸ್ಟೇಟ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಮೂಲಕ ಅಮೆರಿಕದಾದ್ಯಂತ ಕೊರೋನಕ್ಕೆ ಬಲಿಯಾದವರ ಸಂಖ್ಯೆ 19ಕ್ಕೇರಿಕೆಯಾಗಿದೆ. ಇದೇ ವೇಳೆ, ನ್ಯೂಯಾರ್ಕ್‌ನಲ್ಲಿ ವೈರಸ್ ದೃಢಪಟ್ಟ ಪ್ರಕರಣದ ಸಂಖ್ಯೆ 89ಕ್ಕೆ ಏರಿಕೆಯಾಗಿದೆ. ಸೋಂಕುಪೀಡಿತ ಪ್ರಯಾಣಿಕರಿರುವ ಕ್ರೂಸ್ ಹಡಗು ಸ್ಯಾನ್ ಫ್ರಾನಿಸ್ಕೋದ ಹೊರಗೆ ಸಿಲುಕಿಹಾಕಿಕೊಂಡಿದೆ.
ಅಮೆರಿಕದ ಅರ್ಧಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕೊರೋನ ವೈರಸ್ ಪ್ರಕರಣ ವರದಿಯಾಗಿದೆ. ವೈರಸ್‌ನಿಂದ ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ. ಕೆಲವು ಸಮಾವೇಶವನ್ನು ರದ್ದುಪಡಿಸಲಾಗಿದೆ. ಮನೆಯಲ್ಲೇ ಉಳಿದುಕೊಂಡು, ಆನ್‌ಲೈನ್ ಮೂಲಕ ತರಗತಿಗಳಿಗೆ ಹಾಜರಾಗಬೇಕೆಂದು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ತಿಳಿಸಿದೆ.
ಅಮೆರಿಕದ ಈಸ್ಟ್‌ಕೋಸ್ಟ್‌ನಲ್ಲಿ ಮೊದಲ ಸಾವಿನ ಪ್ರಕರಣ ವರದಿಯಾಗಿತ್ತು. ಫ್ಲೋರಿಡಾದಲ್ಲಿ ಇಬ್ಬರು ಮೃತಪಟ್ಟಿದ್ದರು. ನ್ಯೂಯಾರ್ಕ್‌ನಲ್ಲಿ ಶನಿವಾರ ಸೋಂಕು ಪೀಡಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಒಟ್ಟು 89 ಮಂದಿ ಸೋಂಕು ಪೀಡಿತರಾಗಿದ್ದಾರೆ.