ಯೆಸ್‌ಬ್ಯಾಂಕ್ ಸ್ಥಾಪಕರ ಪುತ್ರಿಯ ಲಂಡನ್ ಪ್ರಯಾಣಕ್ಕೆ ತಡೆ
Update: 2020-03-08 22:24 IST
ಹೊಸದಿಲ್ಲಿ, ಮಾ.8: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್‌ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್ ಪುತ್ರಿ ರೋಶನಿ ಕಪೂರ್ ಲಂಡನ್‌ಗೆ ತೆರಳುವ ಪ್ರಯತ್ನವನ್ನು ಮುಂಬೈ ವಿಮಾನನಿಲ್ದಾಣದ ಅಧಿಕಾರಿಗಳು ತಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಣಾ ಕಪೂರ್‌ರನ್ನು ರವಿವಾರ ಬಂಧಿಸಲಾಗಿದ್ದು ಅವರನ್ನು ಮಾರ್ಚ್ 11ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿ ವಿಧಿಸಲಾಗಿದೆ. ಈ ಪ್ರಕರಣದಲ್ಲಿ 4,300 ಕೋಟಿ ರೂ. ಅಕ್ರಮ ನಡೆದಿದ್ದು ರಾಣಾ ಕಪೂರ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯದ ಪ್ರತಿನಿಧಿ ಸುನಿಲ್ ಗೋನ್ಸಾಲ್ವಿಸ್ ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ರಾಣಾ ಕಪೂರ್‌ರನ್ನು ಬಲಿಪಶು ಮಾಡಲಾಗಿದೆ ಎಂದು ರಾಣಾ ಕಪೂರ್ ವಕೀಲರು ಆರೋಪಿಸಿದ್ದಾರೆ.