ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರದ ಸಂದರ್ಭದ ಹತ್ಯೆಗೆ ಸಂಬಂಧಿಸಿ ನಾಲ್ವರ ಬಂಧನ

Update: 2020-03-09 16:08 GMT

ಹೊಸದಿಲ್ಲಿ, ಮಾ. 9: ಕಳೆದ ತಿಂಗಳು ಈಶಾನ್ಯ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಸಂದರ್ಭ ಹಲವರ ಹತ್ಯೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಭೆ ಸಂದರ್ಭ ಸೇರಿದ ಉದ್ರಿಕ್ತ ಗುಂಪಿನ ಭಾಗವಾಗಿದ್ದ ನಾಲ್ವರು ತಾಹಿರ್‌ಪುರ ಸೇತುವೆಯಲ್ಲಿ ನಾಲ್ವರನ್ನು ಇರಿದು ಕೊಂದಿದ್ದರು. ಬಂಧನವನ್ನು ಪೊಲೀಸ್ ಉಪ ಆಯುಕ್ತ ರಾಜೇಶ್ ಡಿಯೊ ದೃಢಪಡಿಸಿದ್ದಾರೆ. ಹತ್ಯೆಯಾದ ನಾಲ್ವರು ಹಾಗೂ ಬಂಧಿತರ ಗುರುತನ್ನು ಶೀಘ್ರದಲ್ಲಿ ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ನಾಲ್ಕು ಕೊಲೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಂದರ್ಭ ಸಂಗ್ರಹಿಸಿದ ಪುರಾವೆಗಳ ಆದಾರದಲ್ಲಿ ಈ ನಾಲ್ವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಿಯೊ ಅವರು ತಿಳಿಸಿದ್ದಾರೆ. ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 24 ಹಾಗೂ 25ರಂದು ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಕ್ರೈಮ್ ಬ್ರಾಂಚ್‌ನ ಎರಡು ಸಿಟ್ ತಂಡಗಳು ತನಿಖೆ ನಡೆಸುತ್ತಿವೆ. ಈ ಹಿಂಸಾಚಾರಕ್ಕೆ ಸಂಬಂಧಿಸಿ ರವಿವಾರದ ವರೆಗೆ ಒಟ್ಟು 702 ಪ್ರಕರಣಗಳನ್ನು ದಾಖಲಿಸಲಾಗಿದೆ. 2384 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಅಥವಾ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News