ಮಹಿಳಾ ಐಪಿಎಲ್ ಪ್ರಾರಂಭಿಸಲು ಸಕಾಲ: ಸುನೀಲ್ ಗವಾಸ್ಕರ್

Update: 2020-03-09 18:08 GMT

ಹೊಸದಿಲ್ಲಿ, ಮಾ. 9 : ಟ್ವೆಂಟಿ- 20 ವಿಶ್ವಕಪ್ ಫೈನಲ್‌ನಲ್ಲಿ ಮಹಿಳಾ ತಂಡ ಸೋಲು ಅನುಭವಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರು ಹೆಚ್ಚು ಪ್ರತಿಭಾವಂತ ಆಟಗಾರ್ತಿಯರನ್ನು ಪತ್ತೆಹಚ್ಚಲು ಪೂರ್ಣ ಪ್ರಮಾಣದ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಿಸಲು ಸಮಯ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯ ಮೊದಲ ಬಾರಿಗೆ ಫೈನಲ್ ತಲುಪಿದ್ದ ಭಾರತವನ್ನು 85 ರನ್ ಅಂತರದಲ್ಲಿ ಸೋಲಿಸಿತು ಆದರೆ ಅದಕ್ಕೂ ಮೊದಲು ಅಜೇಯ ಗೆಲುವಿನ ಓಟದೊಂದಿಗೆ ಫೈನಲ್ ತಲುಪಿತ್ತು ಎಂದು ಗವಾಸ್ಕರ್ ಹೇಳಿದರು.

 ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಭಾರತದ ಮಾಜಿ ನಾಯಕ ಸಂತೋಷ ವ್ಯಕ್ತಪಡಿಸಿದರು.

 ಬಿಸಿಸಿಐ ಈಗಾಗಲೇ ಸಾಕಷ್ಟು ಕೆಲಸ ಮಾಡಿದೆ. ಭಾರತದ ಮಹಿಳಾ ತಂಡವು ತುಂಬಾ ಪ್ರಗತಿ ಸಾಧಿಸಲು ಇದು ಕಾರಣವಾಗಿದೆ.ಪಂದ್ಯಾವಳಿ ಪ್ರಾರಂಭವಾಗಲು ಸುಮಾರು ಒಂದು ತಿಂಗಳ ಮೊದಲು ಭಾರತದ ತಂಡ ಆಸ್ಟ್ರೇಲಿಯಕ್ಕೆ ತೆರಳಿತ್ತು. ಮೂರು ಟ್ವೆಂಟಿ- 20 ಪಂದ್ಯಗಳ ತ್ರಿಕೋನ ಸರಣಿಯನ್ನು ಆಡಿತ್ತು. ಅವರು ಅಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ಆಸ್ಟ್ರೇಲಿಯದ ಪರಿಸ್ಥಿತಿಗಳು ಮತ್ತು ಪಿಚ್‌ಗಳಿಗೆ ಚೆನ್ನಾಗಿ ಒಗ್ಗಿಕೊಂಡಿದ್ದರು. ಈ ಅವಕಾಶ ನೀಡಿದ ಕಾರಣಕ್ಕಾಗಿ ನೀವು ಬಿಸಿಸಿಐ ಕಾರ್ಯವನ್ನು ಶ್ಲಾಘಿಸಬೇಕಾಗಿದೆ ಎಂದು ಅವರು ಹೇಳಿದರು.

 ಮಹಿಳಾ ಬಿಗ್ ಬ್ಯಾಷ್ ಲೀಗ್ ಆಡಿರುವ ಸ್ಮತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಉದಾಹರಣೆಗಳನ್ನು ಗವಾಸ್ಕರ್ ಉಲ್ಲೇಖಿಸಿದ್ದಾರೆ. ಆಸ್ಟ್ರೇಲಿಯದ ಕ್ರಿಕೆಟ್ ಮಂಡಳಿಯು ಆಸ್ಟ್ರೇಲಿಯದ ಮಹಿಳಾ ತಂಡಕ್ಕೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಮಹಿಳಾ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ಆಸ್ಟ್ರೇಲಿಯದ ಆಟಗಾರ್ತಿಯರಿಗೆ, ನಮ್ಮ ಆಟಗಾರ್ತಿಯರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ ಎಂದು ಅವರು ಹೇಳಿದರು.

 ಇದು ಖಂಡಿತವಾಗಿಯೂ ಇನ್ನೂ ಅನೇಕ ಆಟಗಾರ್ತಿಯರನ್ನು ಶೋಧಕ್ಕೆ ಸಹಾಯ ಮಾಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News