ಸುಳ್ಯ: ಮಿಲ್ಕ್ ಮಾಸ್ಟರ್ ರಾಘವ ಗೌಡ ನಿಧನ

Update: 2020-03-10 10:25 GMT

ಸುಳ್ಯ : ಸುಳ್ಯ ತಾಲೂಕಿನ ಮುರುಳ್ಯ ರಾಘವ ಗೌಡ ಪಲ್ಲತ್ತಡ್ಕ (68) ಹೃದಯಾಘಾತದಿಂದ ನಿಧನರಾದರು. ಕೃಷಿಕರಾಗಿದ್ದ ರಾಘವ ಗೌಡರು ಅಧ್ಯಾಪಕ, ಹೈನುಗಾರಿಕ ಕೃಷಿಕರೂ ಕೂಡಾ ಅಗಿದ್ದರು.

2002ರಲ್ಲಿ ದನದ ಹಾಲು ಹಿಂಡುವ ಯಂತ್ರವನ್ನು ಕಂಡು ಹಿಡಿದರು. ಮುಂದೇ ಅದೇ ಯಂತ್ರ ಅವಿಷ್ಕಾರಗೊಂಡು 2004ರಲ್ಲಿ ಮಾರಾಟಕ್ಕೆ ಲಭ್ಯವಾಯಿತು ಇದರಿಂದ ಇವರು ಮಿಲ್ಕ್ ಮಾಸ್ಟರ್ ಎಂದು ಖ್ಯಾತಿಯಾದರು. 2005ರಲ್ಲಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದ ತಳಮಟ್ಟದ ಸಂಶೋಧನೆಗಾಗಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News