ಕೊರೊನಾವೈರಸ್ ಪೀಡಿತ ಸಂಸದರ ಕೈಕುಲುಕಿದ್ದ ಟ್ರಂಪ್!

Update: 2020-03-10 16:11 GMT

ವಾಶಿಂಗ್ಟನ್, ಮಾ. 10: ಫೆಬ್ರವರಿ ಕೊನೆಯಲ್ಲಿ ನಡೆದ ಕನ್ಸರ್ವೇಟಿವ್ ಪಕ್ಷದ ಸಮ್ಮೇಳನದಲ್ಲಿ ನೂತನ-ಕೊರೋನವೈರಸ್ ಸೋಂಕಿನ ಸಂಪರ್ಕಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ, ತಮ್ಮ ಮೇಲೆ ಸ್ವಯಂ ದಿಗ್ಬಂಧನ ಹೇರುವುದಾಗಿ ಅಮೆರಿಕದ ಇಬ್ಬರು ಸಂಸದರು ಸೋಮವಾರ ಘೋಷಿಸಿದ್ದಾರೆ.

ರಿಪಬ್ಲಿಕನ್ ಸಂಸದ ಡೌಗ್ ಕಾಲಿನ್ಸ್ ಮತ್ತು ಅದೇ ಪಕ್ಷದ ಇನ್ನೋರ್ವ ಸಂಸದ ಮ್ಯಾಟ್ ಗೇಟ್ಸ್ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು.

ಸೆಂಟರ್ಸ್‌ ಫಾರ್ ಡಿಸೀಸ್ ಕಂಟ್ರೋಲ್‌ನ ಪ್ರಧಾನ ಕಚೇರಿಯಲ್ಲಿ ಕಳೆದ ಶುಕ್ರವಾರ ಡೌಗ್ ಕಾಲಿನ್ಸ್, ಟ್ರಂಪ್‌ರ ಕೈಕುಲುಕಿದ್ದರು.

ಕಳೆದ ತಿಂಗಳು ನಡೆದ ಕನ್ಸರ್ವೇಟಿವ್ ಪಕ್ಷದ ಸಭೆಯಲ್ಲಿ ಕೊರೋನವೈರಸ್ ಸೋಂಕು ಪೀಡಿತ ವ್ಯಕ್ತಿಯೊಬ್ಬನ ಸಂಪರ್ಕದಲ್ಲಿ ನಾನಿದ್ದೆ ಎನ್ನುವುದನ್ನು ಈಗಷ್ಟೇ ನನಗೆ ತಿಳಿಸಲಾಗಿದೆ ಎಂದು ಡೌಗ್ ಕಾಲಿನ್ಸ್ ಹೇಳಿದರು.

ಎರಡನೇ ಸಂಸದ ಮ್ಯಾಟ್ ಗೇಟ್ಸ್ ಸೋಮವಾರ ಟ್ರಂಪ್ ಜೊತೆಗೆ ಏರ್ ಫೋರ್ಸ್ ವನ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

ಆದರೆ, ಅವರಿಬ್ಬರಲ್ಲೂ ಕೊರೋನವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News