ಇರಾನ್: ಕೊರೋನವೈರಸ್ ಸಾವಿನ ಸಂಖ್ಯೆ 291ಕ್ಕೆ
Update: 2020-03-10 21:44 IST
ಟೆಹರಾನ್ (ಇರಾನ್), ಮಾ. 10: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 24 ಕೊರೋನವೈರಸ್ ಸಾವುಗಳು ಸಂಭವಿಸಿವೆ ಎಂದು ಇರಾನ್ ಮಂಗಳವಾರ ಘೋಷಿಸಿದೆ.
ಇದರೊಂದಿಗೆ ಇರಾನ್‌ನಲ್ಲಿ ಈವರೆಗೆ ಈ ರೋಗದಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ 291ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಅವಧಿಯಲ್ಲಿ 881 ಹೊಸ ಸೋಂಕು ಪ್ರಕರಣಗಳು ಸಂಭವಿಸಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 8,042ಕ್ಕೆ ಏರಿದೆ.
‘‘ಆದರೆ, ಸೋಂಕಿಗೆ ಒಳಗಾಗಿರುವವರ ಪೈಕಿ 2,731 ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ’’ ಎಂದು ವಕ್ತಾರರು ತಿಳಿಸಿದರು.