ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
Update: 2020-03-11 20:03 IST
ಹೊಸದಿಲ್ಲಿ, ಮಾ.11: ಸೌದಿ ಅರೇಬಿಯಾ ಮತ್ತು ರಶ್ಯಾದ ಮಧ್ಯೆ ನಡೆಯುತ್ತಿರುವ ದರ ಸಮರ ಮತ್ತು ಕೊರೊನ ವೈರಸ್‌ನ ಪ್ರಭಾವದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಗಮನಾರ್ಹವಾಗಿ ಕುಸಿದ ಹಿನ್ನೆಲೆಯಲ್ಲಿ , ದಿಲ್ಲಿಯಲ್ಲಿ ತೈಲ ಬೆಲೆ ಬುಧವಾರ ಮತ್ತೆ ಇಳಿಕೆಯಾಗಿದ್ದು ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 2.69 ರೂ. ಮತ್ತು ಡೀಸೆಲ್ ಬೆಲೆ 2.33 ರೂ. ಕಡಿಮೆಯಾಗಿದೆ.
ಬುಧವಾರ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 70.29 ರೂ. ಮತ್ತು ಡೀಸೆಲ್ ಬೆಲೆ 63.01 ರೂ.ಗೆ ಇಳಿದಿದೆ. ಮುಂಬೈಯಲ್ಲಿ ಕ್ರಮವಾಗಿ 75.99 ಮತ್ತು 65.97 ರೂ, ಚೆನ್ನೈಯಲ್ಲಿ 73.02 ರೂ. ಮತ್ತು 66.48 ರೂ, ಬೆಂಗಳೂರಿನಲ್ಲಿ 72.70 ಮತ್ತು 65.16 ರೂ. ಆಗಿದೆ. ಫೆಬ್ರವರಿ 27ರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರೀ ಇಳಿಮುಖವಾಗಿದ್ದು ಸುಮಾರು 30% ಕಡಿಮೆಯಾಗಿದೆ.