×
Ad

ಭಾರತದಲ್ಲಿ ಕೊರೋನ ವೈರಸ್ ಸೋಂಕು ಪೀಡಿತರ ಸಂಖ್ಯೆ 73ಕ್ಕೇರಿಕೆ

Update: 2020-03-12 13:46 IST

ಹೊಸದಿಲ್ಲಿ, ಮಾ.12: ಕೊರೋನ ವೈರಸ್ ಒಂದು ಕಳವಳಕಾರಿ ವಿಚಾರ ಎಂದು ಹೇಳಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ದೇಶಾದ್ಯಂತ ವೈರಸ್ ಪೀಡಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ ಎಂದು ಸಂಸತ್ತಿಗೆ ಗುರುವಾರ ತಿಳಿಸಿದ್ದಾರೆ.

 ಅಸಾಧಾರಣ ಸನ್ನಿವೇಶಗಳಿಗೆ ಅಸಾಧಾರಣ ಪ್ರತಿಕ್ರಿಯೆ ಅಗತ್ಯವಿರುತ್ತದೆ ಎಂದಿರುವ ಜೈ ಶಂಕರ್, ಈ ಸಮಯದಲ್ಲಿ ಪ್ರಯಾಣವನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ಅತ್ಯಂತ ಅಪಾಯಕಾರಿ ಎಂದು ಹೇಳಿದರು.

  ದೇಶವ್ಯಾಪಿ 73 ಕೊರೋನ ವೈರಸ್ ಪ್ರಕರಣ ವರದಿಯಾಗಿದ್ದು, ಕಳೆದ ಎರಡು ವಾರಗಳಲ್ಲಿ ಈ ಪ್ರಕರಣದ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣ ದಾಖಲಾಗಿದೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ಚಾಲ್ತಿ ಇರುವ ವೀಸಾಗಳನ್ನು ಎಪ್ರಿಲ್ 15ರ ತನಕ ರದ್ದುಪಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ, ಕೊರೋನವೈರಸ್ ಒಂದು ಸಾಂಕ್ರಾಮಿಕ ರೋಗ ಎಂದು ಘೋಷಿಸಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News