ಇಸ್ರೇಲ್: ಕೊರೋನವೈರಸ್ ಇದೆ ಎಂದು ಹೇಳಿ ಭಾರತ ಮೂಲದ ವ್ಯಕಿಗೆ ಹಲ್ಲೆ
Update: 2020-03-17 20:17 IST
ಜೆರುಸಲೇಮ್, ಮಾ. 17: ಇಸ್ರೇಲ್‌ನ ಟಿಬರಿಯಸ್ ನಗರದಲ್ಲಿ ಭಾರತ ಮೂಲದ ಯಹೂದಿಯೊಬ್ಬರಿಗೆ ಕೊರೋನ ಸೋಂಕು ಇದೆ ಎಂದು ಆರೋಪಿಸಿದ ಇಬ್ಬರು ವ್ಯಕ್ತಿಗಳು, ಅವರನ್ನು ‘ಚೀನಾ ಪ್ರಜೆ’ ಎಂದು ಕರೆದು ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.
ಮಣಿಪುರ ಮತ್ತು ಮಿಝೋರಾಮ್ ನ ಬಿನೈ ಮೆನಶೆ ಸಮುದಾಯಕ್ಕೆ ಸೇರಿದ 28 ವರ್ಷದ ಅಮ್-ಶಾಲಿಮ್ ಸಿಂಗ್ಸನ್‌ರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ‘ಚಾನೆಲ್ 13’ ವರದಿ ಮಾಡಿದೆ. ಹಲ್ಲೆಕೋರರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ನಾನು ಚೀನಾದವ ಅಲ್ಲ ಹಾಗೂ ನನಗೆ ಕೊರೋನವೈರಸ್ ಇಲ್ಲ ಎಂಬುದಾಗಿ ಆಕ್ರಮಣಕಾರರಿಗೆ ನಾನು ಎಷ್ಟು ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ಸಿಂಗ್ಸನ್ ಪೊಲೀಸರಿಗೆ ತಿಳಿಸಿದರು. ಘಟನೆ ಶನಿವಾರ ನಡೆದಿದೆ.