×
Ad

ಅಮೆರಿಕ: ಕೊರೋನವೈರಸ್ ಲಸಿಕೆಯ ಮಾನವ ಪ್ರಯೋಗ ಆರಂಭ

Update: 2020-03-17 21:52 IST

ವಾಶಿಂಗ್ಟನ್, ಮಾ. 17: ನೂತನ ಕೊರೋನವೈರಸ್ ವಿರುದ್ಧ ಅಭಿವೃದ್ಧಿಪಡಿಸಲಾಗಿರುವ ಸಂಭಾವ್ಯ ಲಸಿಕೆಯ ಮೊದಲ ಮಾನವ ಪ್ರಯೋಗ ಅಮೆರಿಕದ ಸಿಯಾಟಲ್‌ನಲ್ಲಿ ಆರಂಭವಾಗಿದೆ ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ, ಲಸಿಕೆಯು ಇನ್ನೊಂದು ವರ್ಷ ಅಥವಾ 18 ತಿಂಗಳ ಬಳಿಕವಷ್ಟೇ ಬಳಕೆಗೆ ಲಭ್ಯವಾಗಬಹುದು. ಅದಕ್ಕೂ ಮೊದಲು ಲಸಿಕೆಯು ಪರಿಣಾಮಕಾರಿ ಹಾಗೂ ಬಳಕೆಗೆ ಸುರಕ್ಷಿ ಎನ್ನುವುದು ಸಾಬೀತಾಗಬೇಕಾಗಿದೆ.ಎಂಆರ್‌ಎನ್‌ಎ-1273 ಎಂಬ ಹೆಸರಿನ ಲಸಿಕೆಯನ್ನು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್)ಯ ವಿಜ್ಞಾನಿಗಳು ಮ್ಯಾಸಚೂಸಿಟ್ಸ್‌ನ ಕೇಂಬ್ರಿಜ್‌ನಲ್ಲಿರುವ ಜೈವಿಕ ತಂತ್ರಜ್ಞಾನ ಕಂಪೆನಿ ‘ಮೋಡರ್ನ’ದ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News