×
Ad

ಯುರೋಪ್ ಕಾರ್ಖಾನೆಗಳನ್ನು ಮುಚ್ಚಲು ಮುಂದಾದ ಫೋಕ್ಸ್‌ವ್ಯಾಗನ್

Update: 2020-03-17 21:57 IST

ಫ್ರಾಂಕ್‌ಫರ್ಟ್ (ಜರ್ಮನಿ), ಮಾ. 17: ಯುರೋಪ್‌ನಲ್ಲಿರುವ ತನ್ನ ಹೆಚ್ಚಿನ ಕಾರು ತಯಾರಕ ಕಾರ್ಖಾನೆಗಳನ್ನು ಮುಚ್ಚಲು ಸಿದ್ಧತೆ ನಡೆಸುವುದಾಗಿ ಜರ್ಮನಿಯ ಬೃಹತ್ ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ ಮಂಗಳವಾರ ಹೇಳಿದೆ.

 ಕೊರೋನವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಪೂರೈಕೆ ಕೊಂಡಿಯಲ್ಲಿ ಅಸ್ತವ್ಯಸ್ತ ಉಂಟಾಗಿರುವ ಹಾಗೂ ಕಾರುಗಳಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಫೋಕ್ಸ್‌ವ್ಯಾಗನ್ ಈ ಕ್ರಮ ತೆಗೆದುಕೊಂಡಿದೆ.

‘‘ನಮ್ಮ ಸ್ಪೇನ್ ಕಾರ್ಖಾನೆಗಳಲ್ಲಿ, ಪೋರ್ಚುಗಲ್‌ನ ಸೆಟುಬಲ್, ಸ್ಲೊವೇಕಿಯ ಬ್ರಾಟಿಸ್ಲಾವ ಮತ್ತು ಇಟಲಿಯ ಲಂಬೋರ್ಗಿನಿ ಮತ್ತು ಡುಕಾಟಿ ಕಾರ್ಖಾನೆಗಳಲ್ಲಿ ಈ ವಾರದ ಕೊನೆಯ ಮೊದಲು ಉತ್ಪಾದನೆಯನ್ನು ನಿಲ್ಲಿಸಲಾಗುವುದು’’ ಎಂದು ಫೋಕ್ಸ್‌ವ್ಯಾಗನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಬರ್ಟ್ ಡೀಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News