×
Ad

ತಪಾಸಣೆ ಸಾಮರ್ಥ್ಯ ಹೆಚ್ಚಿಸಲು ಎಲ್ಲ ದೇಶಗಳಿಗೆ ಡಬ್ಲುಎಚ್‌ಒ ಕರೆ

Update: 2020-03-17 22:17 IST

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಮಾ. 17: ಕೊರೋನವೈರಸ್ ಸೋಂಕು ತಪಾಸಣೆ ಸಾಮರ್ಥ್ಯವನ್ನು ಹೆಚ್ಚಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಸೋಮವಾರ ಎಲ್ಲ ದೇಶಗಳಿಗೆ ಕರೆ ನೀಡಿದೆ. ರೋಗದ ಸೋಂಕು ಹರಡುವುದನ್ನು ತಡೆಯವ ಅತ್ಯುತ್ತಮ ಮಾರ್ಗ ಇದಾಗಿದೆ ಎಂದು ಅದು ಹೇಳಿದೆ.

‘‘ಎಲ್ಲ ದೇಶಗಳಿಗೆ ನಮ್ಮದೊಂದಿ ಸರಳ ಸಂದೇಶವಿದೆ: ರೋಗದ ತಪಾಸಣೆ ಸಾಮರ್ಥ್ಯವನ್ನು ಹೆಚ್ಚಿಸಿ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿದೇರ್ಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಜಿನೀವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘‘ಎಲ್ಲ ಶಂಕಿತ ಪ್ರಕರಣಗಳ ತಪಾಸಣೆ ಮಾಡಲು ಎಲ್ಲ ದೇಶಗಳಿಗೆ ಸಾಧ್ಯವಾಗಬೇಕು. ಅವುಗಳು ಈ ಸಾಂಕ್ರಾಮಿಕದ ವಿರುದ್ಧ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋರಾಟ ಮಾಡಲಾಗದು’’ ಎಂದು ಅವರು ಅಭಿಪ್ರಾಯಪಟ್ಟರು.

 ತಪಾಸಣೆ ನಡೆಸದೆ ಕೊರೋನವೈರಸ್ ಸೋಂಕಿತರನ್ನು ಪ್ರತ್ಯೇಕಿಸಲಾಗದು ಹಾಗೂ ಸೋಂಕು ಹರಡುವ ಸರಣಿ ಮುರಿಯುವುದಿಲ್ಲ ಎಂದು ಟೆಡ್ರಾಸ್ ಹೇಳಿದರು.

ಜಗತ್ತಿನಾದ್ಯಂತ 14,000 ಮಂದಿಗೆ ಸೋಂಕು: ಹೊಸದಾಗಿ 862 ಸಾವು

ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಾದ್ಯಂತ ಸುಮಾರು 14,000 ಮಂದಿ ನೋವೆಲ್-ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,67,500ಕ್ಕೆ ಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ತನ್ನ ಮಂಗಳವಾರದ ವರದಿಯಲ್ಲಿ ತಿಳಿಸಿದೆ.

ಅದೇ ವೇಳೆ, ಈ ಸಾಂಕ್ರಾಮಿಕದಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಾದ್ಯಂತ 862 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 6,606ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News