ಕೊರೋನ ವೈರಸ್ ಭೀತಿ: ಶಾಹೀನ್‌ಬಾಗ್ ತೆರವಿಗೆ ಸೂಚನೆ
Update: 2020-03-17 23:06 IST
ಹೊಸದಿಲ್ಲಿ, ಮಾ. 17: ಕೊರೋನ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಶಾಹೀನ್‌ಬಾಗ್ ಅನ್ನು ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳು, ಆಗ್ನೇಯ ಜಿಲ್ಲಾಡಳಿತದ ಅಧಿಕಾರಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವರಲ್ಲಿ ಮಂಗಳವಾರ ಮನವಿ ಮಾಡಿದ್ದಾರೆ.
ಕೊರೋನ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಮಾರ್ಚ್ 31ರ ವರೆಗೆ ಧಾರ್ಮಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ ಅಥವಾ ಸಾಂಸ್ಕೃತಿಕ-ಹೀಗೆ ಯಾವುದೇ ಸಭೆಯಾಗಿದ್ದರೂ 50ಕ್ಕಿಂತಲೂ ಅಧಿಕ ಜನರು ಸೇರುವುದಕ್ಕೆ ಅವಕಾಶ ಇಲ್ಲ ಎಂದು ದಿಲ್ಲಿ ಸರಕಾರ ಘೋಷಿಸಿದ ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಡಿಸೆಂಬರ್ 15ರಿಂದ ಇಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಆರಂಭವಾಗಿತ್ತು.