ಅಯೋಗ್ಯ, ದುಷ್ಟ ನ್ಯಾ. ರಂಜನ್ ಗೊಗೋಯಿ: ನ್ಯಾ. ಮಾರ್ಕಂಡೇಯ ಕಟ್ಜು ವಾಗ್ದಾಳಿ

Update: 2020-03-17 17:37 GMT
ನ್ಯಾ. ಮಾರ್ಕಂಡೇಯ ಕಟ್ಜು, ನ್ಯಾ. ರಂಜನ್ ಗೊಗೋಯಿ

ಹೊಸದಿಲ್ಲಿ, ಮಾ. 17: ಇತ್ತೀಚಿಗೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರಕಾರದಿಂದ ನಾಮನಿರ್ದೇಶನಗೊಂಡಿರುವ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ವಿರುದ್ಧ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

"ನಾನು ಇಪ್ಪತ್ತು ವರ್ಷ ವಕೀಲನಾಗಿದ್ದೆ. ಬಳಿಕ ಇಪ್ಪತ್ತು ವರ್ಷ ನ್ಯಾಯಾಧೀಶನಾಗಿದ್ದೆ. ಈ ಅವಧಿಯಲ್ಲಿ ನಾನು ಬಹಳಷ್ಟು ಉತ್ತಮ ನ್ಯಾಯಾಧೀಶರನ್ನು ನೋಡಿದ್ದೇನೆ. ಹಾಗೆ ಕೆಟ್ಟ ನ್ಯಾಯಾಧೀಶರನ್ನು ನೋಡಿದ್ದೇನೆ. ಆದರೆ ಈ ಲೈಂಗಿಕ ವಿಕೃತಿಯ ರಂಜನ್ ಗೊಗೋಯಿಯಂತಹ ನಿರ್ಲಜ್ಜ, ನಾಚಿಕೆಗೇಡು ನ್ಯಾಯಾಧೀಶನನ್ನು ನಾನು ಭಾರತದ ನ್ಯಾಯಾಂಗದಲ್ಲಿ ನೋಡಲೇ ಇಲ್ಲ. ಈ ವ್ಯಕ್ತಿಯಲ್ಲಿ ಇಲ್ಲದ ದುಷ್ಟತನಗಳೇ ಇಲ್ಲ. ಈ ಅಯೋಗ್ಯ ಹಾಗು ದುಷ್ಟ ಇನ್ನು ಭಾರತದ ಸಂಸತ್ತಿನಲ್ಲಿ ಇರಲಿದ್ದಾನೆ. ಹರಿ ಓಂ" ಎಂದು ಮಾರ್ಕಂಡೇಯ ಕಟ್ಜು ಮಂಗಳವಾರ ರಾತ್ರಿ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ. 

ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ:

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News