ಕೇರಳ ಪೊಲೀಸರ ಕೈ ತೊಳೆಯುವ ನೃತ್ಯ ವೀಡಿಯೊ ವೈರಲ್

Update: 2020-03-18 09:17 GMT

ತಿರುವನಂತಪುರಂ: ಕೊರೋನವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಆಗಾಗ ಸೋಪ್ ಬಳಸಿ ಕೈಗಳನ್ನು ಚೆನ್ನಾಗಿ ತೊಳೆಯಬೇಕೆಂಬ ಸಲಹೆಯನ್ನನುಸರಿಸಿ ಕೇರಳ ಪೊಲೀಸರು ತಯಾರಿಸಿರುವ ತಮಾಷೆಯ ಡ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಿಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

ಈ ವೀಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು ಸಾವಿರಾರು ಮಂದಿ ಅದನ್ನು ಶೇರ್ ಮಾಡಿ ಲೈಕ್ ಮಾಡಿದ್ದಾರೆ. ಕೇರಳ ರಾಜ್ಯ ಪೊಲೀಸರ ಮಾಧ್ಯಮ ಕೇಂದ್ರ ಬಿಡುಗಡೆಗೊಳಿಸಿರುವ ಈ ವೀಡಿಯೋದಲ್ಲಿ ಕೈಗಳನ್ನು ತೊಳೆಯುವ ಸರಿಯಾದ ವಿಧಾನ ತೋರಿಸುತ್ತಾ ಪೊಲೀಸರು ನೃತ್ಯ ಮಾಡುತ್ತಿರುವುದು ಕಾಣಿಸುತ್ತದೆ. ಈ 1.04 ಸೆಕೆಂಡ್ ಅವಧಿಯ ವೀಡಿಯೋದಲ್ಲಿ ಆರು ಮಂದಿ ಪೊಲೀಸರು ಅಯ್ಯಪ್ಪನುಮ್ ಕೋಶಿಯುಂ ಚಿತ್ರದ ಜನಪ್ರಿಯ 'ಕಲಕ್ಕತ್ತ' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಜಾಗೃತಿ ಮೂಡಿಸುವ ಯತ್ನವಾಗಿ ಕೇರಳ ಪೊಲೀಸರು ಸಿದ್ಧಪಡಿಸಿರುವ ಈ ವೀಡಿಯೋವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News