ವಿದೇಶಗಳಲ್ಲಿರುವ ಕನಿಷ್ಠ 276 ಭಾರತೀಯರಿಗೆ ಕೊರೋನಾ ಸೋಂಕು
Update: 2020-03-18 16:07 IST
ನವದೆಹಲಿ: ವಿದೇಶಗಳಲ್ಲಿರುವ ಕನಿಷ್ಠ 276 ಭಾರತೀಯರಿಗೆ ಕೊರೋನವೈರಸ್ ಸೋಂಕು ತಗಲಿದೆ ಎಂದು ಲೋಕಸಭೆಗೆ ಇಂದು ಸರಕಾರ ತಿಳಿಸಿದೆ. ಈ 276 ಮಂದಿಯ ಪೈಕಿ 255 ಮಂದಿ ಇರಾನ್‍ನಲ್ಲಿದ್ದರೆ, 12 ಮಂದಿ ಸಂಯುಕ್ತ ಅರಬ್ ಸಂಸ್ಥಾನ ಹಾಗೂ ಐದು ಮಂದಿ ಇಟಲಿಯಲ್ಲಿದ್ದಾರೆಂಬ ಮಾಹಿತಿಯನ್ನು ಲಿಖಿತ ಉತ್ತರದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ನೀಡಿದ್ದಾರೆ.
ಹಾಂಕಾಂಗ್, ಕುವೈತ್, ರ್ವಾಂಡ ಹಾಗೂ ಶ್ರೀಲಂಕಾದಲ್ಲಿ ತಲಾ ಒಬ್ಬ ಭಾರತೀಯನಿಗೆ ಕೊರೋನವೈರಸ್ ತಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಇರಾನ್‍ನಿಂದ ಸೋಮವಾರ ಸ್ವದೇಶಕ್ಕೆ ಮರಳಿದ ನಾಲ್ಕನೇ ತಂಡದಲ್ಲಿ 53 ಭಾರತೀಯರಿದ್ದರು. ಇದರೊಂದಿಗೆ ಇರಾನ್‍ನಿಂದ ಸ್ವದೇಶಕ್ಕೆ ಕರೆಸಲ್ಪಟ್ಟ ಭಾರತೀಯರ ಸಂಖ್ಯೆ 389ಗೆ ತಲುಪಿದೆ.