×
Ad

ಹೋಂಗಾರ್ಡ್ ಗೆ ಬಲವಂತದಿಂದ ಗೋಮೂತ್ರ ಕುಡಿಸಿದ ಬಿಜೆಪಿ ನಾಯಕ ಜೈಲುಪಾಲು

Update: 2020-03-18 17:10 IST

ಕೊಲ್ಕತ್ತಾ: ನಗರದಲ್ಲಿ ಸೋಮವಾರ ಕರ್ತವ್ಯದಲ್ಲಿದ್ದ ಹೋಂಗಾರ್ಡ್ ಒಬ್ಬರಿಗೆ ಬಲವಂತದಿಂದ ಗೋಮೂತ್ರ ಕುಡಿಸಿದ ಬಿಜೆಪಿಯ ಸ್ಥಳೀಯ ನಾಯಕನೊಬ್ಬ ಇದೀಗ ಜೈಲುಗಂಬಿ ಎಣಿಸುತ್ತಿದ್ದಾನೆ.

ಅದು ಪ್ರಸಾದ ಹಾಗೂ ಕೊರೋನವೈರಸ್ ತಡೆಗಟ್ಟುತ್ತದೆ ಎಂದು ಹೇಳಿ ತನಗೆ ಬಲವಂತವಾಗಿ ಗೋಮೂತ್ರ ಕುಡಿಸಲಾಗಿತ್ತು ಎಂದು 34 ವರ್ಷದ ಹೋಂಗಾರ್ಡ್ ಪಿಂಟು ಪ್ರಾಮಾಣಿಕ್ ಆರೋಪಿಸಿದ್ದಾರೆ. ಗೋಮೂತ್ರ ಸೇವಿಸಿ ಎರಡು ಬಾರಿ  ವಾಂತಿ ಮಾಡಿದ ಆತನನ್ನು ಇತರರು ಆಸ್ಪತ್ರೆಗೆ ದಾಖಲಿಸಿದ ನಂತರ ಆತ ಪೊಲೀಸ್ ದೂರು ನೀಡಿದ್ದ.

ಬಂಧಿತ ಬಿಜೆಪಿ ಪದಾಧಿಕಾರಿಯನ್ನು ನಾರಾಯಣ್ ಚಟರ್ಜಿ ಎಂದು ಗುರುತಿಸಲಾಗಿದೆ. ಆರೋಪಿ ಸೋಮವಾರ ನಗರದ ನಿಮ್ತಲಾ ರುದ್ರಭೂಮಿಯ ಸಮೀಪವಿರುವ ಅಕ್ರಮ ಗೋ ಆಶ್ರಯತಾಣದಲ್ಲಿ ಗೋಮಾತಾ ಆರಾಧನಾ ಕಾರ್ಯಕ್ರಮ ಆಯೋಜಿಸಿದ್ದ ಸಂದರ್ಭ ಅದನ್ನು ನೋಡಲು ಆಗಮಿಸಿದ್ದ ಹಲವರಿಗೆ ಗೋಮೂತ್ರ ಕುಡಿಸಿದ್ದ. ಆ ಸಂದರ್ಭ ಬಿ ಕೆ ಪಾಲ್ ಅವೆನ್ಯೂ-ನಿಮ್ತಲಾ ಘಾಟ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪಿಂಟು ಪ್ರಮಾಣಿಕ್‍ನಿಗೂ  ಗೋಮೂತ್ರ ಕುಡಿಸಲಾಗಿತ್ತು ಎನ್ನಲಾಗಿದೆ.

ಚಟರ್ಜಿಯ ವಿರುದ್ದ ಸೆಕ್ಷನ್ 269, 278 ಹಾಗೂ 114 ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News