ಕೆಜಿಎಂಯು ಕಿರಿಯ ನಿವಾಸಿ ವೈದ್ಯನಿಗೆ ಕೊರೋನ ವೈರಸ್ ಸೋಂಕು

Update: 2020-03-18 17:06 GMT

ಲಕ್ನೋ, ಮಾ. 18: ಕಿಂಗ್ಸ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯ (ಕೆಜಿಎಂಯು)ದಲ್ಲಿ ಕೊರೋನ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳ ಸಂಪರ್ಕದಿಂದ ಅಲ್ಲಿನ 25 ವರ್ಷದ ಕಿರಿಯ ನಿವಾಸಿ ವೈದ್ಯರೊಬ್ಬರು ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ವೈದ್ಯರನ್ನು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

ಕಿಂಗ್ಸ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಕೆನಡಾದ ಮಹಿಳೆ ಹಾಗೂ ಅವರ ಸಂಬಂಧಿಯ ಸಂಪರ್ಕಕ್ಕೆ ಈ ವೈದ್ಯ ಒಳಗಾಗಿದ್ದರು. ಈ ವೈದ್ಯ ರೋಗಿಗಳ ದೇಹ ದ್ರವದ ಮಾದರಿಗಳನ್ನು ಸಂಗ್ರಹಿಸಿದ್ದರು. ಕೂಡಲೇ ಅವರಲ್ಲಿ ಕೊರೋನ ವೈರಸ್ ಸೋಂಕಿನ ಕೆಲವು ಲಕ್ಷಣಗಳು ಕಂಡು ಬಂದುವು. ಅವರು ವಿಶ್ವವಿದ್ಯಾನಿಲಯದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತು ಎಂದು ಕೆಜಿಎಂಯು ವಕ್ತಾರ ಡಾ. ಸುಧೀರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News