ಸಿಬಿಎಸ್‌ಇ 10ಮತ್ತು 12ನೆ ತರಗತಿ ಪರೀಕ್ಷೆಗಳು ಮುಂದಕ್ಕೆ

Update: 2020-03-18 18:23 GMT
ಫೈಲ್ ಚಿತ್ರ

ಹೊಸದಿಲ್ಲಿ,ಮಾ.18: ಕೊರೋನವೈರಸ್ ವಿರುದ್ಧ ಮುನ್ನೆಚ್ಚರಿಕೆಯ ಕ್ರಮವಾಗಿ ಮತ್ತು ಕೇಂದ್ರ ಸರಕಾರದ ಸೂಚನೆಗನುಗುಣವಾಗಿ ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಹಾಲಿ ನಡೆಯುತ್ತಿರುವ ಮತ್ತು ಮಾ.19ರಿಂದ ಮಾ.31ರವರೆಗೆ ನಿಗದಿಯಾಗಿರುವ ತನ್ನ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿರುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಬುಧವಾರ ಸಂಜೆ ಪ್ರಕಟಿಸಿದೆ. ಮುಂದೂಡಲಾದ ಪರೀಕ್ಷೆಗಳ ನೂತನ ವೇಳಾಪಟ್ಟಿಯನ್ನು ಮಾ.31ರ ಬಳಿಕ ಪ್ರಕಟಿಸುವುದಾಗಿ ಅಧಿಸೂಚನೆಯಲ್ಲಿ ಅದು ತಿಳಿಸಿದೆ.

ಮೇಲೆ ಉಲ್ಲೇಖಿಸಲಾದ ಅವಧಿಯಲ್ಲಿ ಈಶಾನ್ಯ ಭಾರತ ದಿಲ್ಲಿ ಅಭ್ಯರ್ಥಿಗಳಿಗಾಗಿ ಮರುನಿಗದಿಗೊಳಿಸಲಾಗಿದ್ದ ಮರುಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News