×
Ad

ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ಅನಿಲ್ ಅಂಬಾನಿ

Update: 2020-03-19 12:45 IST

ಮುಂಬೈ, ಮಾ.19: ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ  ಯೆಸ್ ಬ್ಯಾಂಕ್ ಮತ್ತು ಅದರ ಸಂಸ್ಥಾಪಕ ರಾಣಾ ಕಪೂರ್ ಅವರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಇಂದು ಬೆಳಿಗ್ಗೆ ಮುಂಬೈನ ಜಾರಿ ನಿರ್ದೇಶನಾಲಯಕ್ಕೆ ಹಾಜರಾದರು.

ಜಾರಿ ನಿರ್ದೇಶನಾಲಯವು  ಈ ವಾರದ ಆರಂಭದಲ್ಲಿ ಸಮನ್ಸ್ ಜಾರಿಗೊಳಿಸಿತ್ತು ಆದರೆ 60 ವರ್ಷದ ಅಂಬಾನಿ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಸಮಯಾವಕಾಶ  ಕೇಳಿದ್ದರು. ಅವರ ಮನವಿಯನ್ನು ಅಂಗೀಕರಿಸಿದ ಏಜೆನ್ಸಿ  ಬೆಳಗ್ಗೆ 11 ಗಂಟೆಯೊಳಗೆ ಹಾಜರಾಗುವಂತೆ ತಿಳಿಸಿತ್ತು.

ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ತನ್ನ ಬ್ಯಾಂಕ್ ವಿಸ್ತರಿಸಿರುವ ಕೆಟ್ಟ ಸಾಲಗಳನ್ನು ನಿಧಾನಗೊಳಿಸಿದ್ದಕ್ಕಾಗಿ ಕಪೂರ್ ಅವರ ಕುಟುಂಬದಿಂದ ನಿಯಂತ್ರಿಸಲ್ಪಡುವ ಕಂಪನಿಗಳ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಪ್ರಕರಣವನ್ನು ದಾಖಲಿಸಿದ ನಂತರ ಯೆಸ್ ಬ್ಯಾಂಕ್ ನೀಡಿದ ಸಾಲಗಳಿಗೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಲಾಗುವುದು.

ಯೆಸ್  ಬ್ಯಾಂಕ್ ರಿಲಯನ್ಸ್ ಗ್ರೂಪ್‌ಗೆ ಸುಮಾರು 12,800 ಕೋಟಿ ರೂ.ಸಾಲ ನೀಡಿದೆ.

ಕಳೆದ ವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರಿಲಯನ್ಸ್ ಗ್ರೂಪ್ ರಾಣಾ ಕಪೂರ್ ಅವರೊಂದಿಗಿನ ಯಾವುದೇ ಸಂಪರ್ಕವನ್ನು ನಿರಾಕರಿಸಿದೆ, ಅವರ ವಿರುದ್ಧ ಹಣ ವರ್ಗಾವಣೆ ಮತ್ತು ಲಂಚ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News