ರವಿವಾರದಿಂದ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಭಾರತದಲ್ಲಿ ಇಳಿಯಲು ಅವಕಾಶವಿಲ್ಲ

Update: 2020-03-19 13:30 GMT

ಹೊಸದಿಲ್ಲಿ: ರವಿವಾರದಿಂದ (ಮಾರ್ಚ್ 22) ಒಂದು ವಾರಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಭಾರತದಲ್ಲಿ ಇಳಿಯುವುದಕ್ಕೆ ಅವಕಾಶವಿಲ್ಲ ಎಂದು ಭಾರತ ಸರಕಾರ ಘೋಷಿಸಿದೆ. ಕೊರೊನಾವೈರಸ್ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಮನೆಗಳಿಂದಲೇ ಕೆಲಸ ಮಾಡಿ ಎಂದು ಹೇಳಲಾಗಿದ್ದು, 10ರಿಂದ ಕೆಳಗಿನ ವಯಸ್ಸಿನವರು ಮತ್ತು 65 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಉಳಿಯಬೇಕು ಎಂದು ತಿಳಿಸಲಾಗಿದೆ.

ಇಂದು 18 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕೊರೊನಾಪೀಡಿತರ ಸಂಖ್ಯೆ ಭಾರತದಲ್ಲಿ 173ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News