ಚೀನಾದಲ್ಲಿ ಹೊಸ ಸೋಂಕು ಪ್ರಕರಣ ಶೂನ್ಯ

Update: 2020-03-19 15:41 GMT

 ಬೀಜಿಂಗ್, ಮಾ. 19: ಕೊರೋನವೈರಸ್ ಸೋಂಕು ಹರಡಿದಂದಿನಿಂದ ಮೊದಲ ಬಾರಿಗೆ ಗುರುವಾರ ಚೀನಾ ಪ್ರಜೆಗಳಲ್ಲ್ಲಿ ಯಾವುದೇ ಸೊಂಕು ವರದಿಯಾಗಿಲ್ಲ. ಆದರೆ, ವಿದೇಶಿಯರ ಸೋಂಕು ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು, ಕಳವಳಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೊರೋನವೈರಸ್ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್ ನಗರದಲ್ಲಿ ಗುರುವಾರ ಯಾವುದೇ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಆದರೆ, ಚೀನಾದಲ್ಲಿ ಹೊಸದಾಗಿ 8 ಸಾವುಗಳು ಸಂಭವಿಸಿವೆ. ಹಾಗೂ ಆ ಸಾವುಗಳೆಲ್ಲವೂ ಹುಬೈ ಪ್ರಾಂತದಲ್ಲೇ ಸಂಭವಿಸಿವೆ. ಇದರೊಂದಿಗೆ ಚೀನಾದಲ್ಲಿ ಕೊರೋನವೈರಸ್‌ನಿಂದಾಗಿ ಸತ್ತವರ ಸಂಖ್ಯೆ 3,245ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News