ಕೊರೋನ ವೈರಸ್ ಭೀತಿಯ ಹೊರತಾಗಿಯೂ ನಡೆಯುತ್ತಿರುವ ಕ್ರೀಡಾ ಸ್ಪರ್ಧೆಗಳತ್ತ ನೋಟ

Update: 2020-03-19 18:12 GMT

ಒಲಿಂಪಿಕ್ಸ್

ಜುಲೈ 24ರಿಂದ ಆಗಸ್ಟ್ 19ರ ತನಕ ನಿಗದಿಯಾಗಿರುವ ಒಲಿಂಪಿಕ್ ಗೇಮ್ಸ್ ಈವರೆಗೆ ಮುಂದೂಡಿಕೆ ಅಥವಾ ರದ್ದುಪಡಿಸಲಾಗಿಲ್ಲ.

ಟೋಕಿಯೊ 2020ರ ಗೇಮ್ಸ್ ಕ್ರೀಡಾ ಜ್ಯೋತಿ ಬೆಳಗುವ ಸಮಾರಂಭ ಪುರಾತನ ಒಲಿಂಪಿಯಾದಲ್ಲಿ ಪ್ರೇಕ್ಷಕರಿಲ್ಲದೆ ನಡೆದಿದೆ.

ಒಲಿಂಪಿಕ್ಸ್ ಕ್ರೀಡಾ ಜ್ಯೋತಿ ಹಸ್ತಾಂತರದ ಕಾರ್ಯಕ್ರಮ ಅಥೆನ್ಸ್‌ನಲ್ಲಿ ಮಾರ್ಚ್ 19ರಂದು ಪ್ರೇಕ್ಷಕರಿಲ್ಲದೆ ನೆರವೇರಿತು.

ಫುಟ್ಬಾಲ್

ಆಸ್ಟ್ರೇಲಿಯದ ಉನ್ನತ ಎ-ಲೀಗ್ ಫುಟ್ಬಾಲ್ ಸ್ಪರ್ಧೆಗೆ 2019-20ರ ಋತುವಿನ ಉಳಿದ ಅವಧಿಗೆ ಪ್ರೇಕ್ಷಕರಿಗೆ ನಿಷೇಧಿಸಲಾಗಿದೆ. ನಿರ್ಬಂಧ ವಿಧಿಸಿರುವ ಕಾರಣ ಉಭಯ ತಂಡಗಳು ತಾತ್ಕಾಲಿಕವಾಗಿ ತೊಂದರೆ ಎದುರಿಸುತ್ತಿವೆ.

ಟರ್ಕಿಯ ಸೂಪರ ಲೀಗ್ ಪಂದ್ಯಗಳು ಈಗಲೂ ನಡೆಯುತ್ತಿವೆ. ಆದರೆ, ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಅವಕಾಶ ನಿರಾಕರಿಸಲಾಗಿದೆ.

ರಗ್ಬಿ ಯೂನಿಯನ್

ಸ್ಕಾಟ್ಲೆಂಡ್ ಹಾಗೂ ಜಾರ್ಜಿಯ ವಿರುದ್ಧ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಪಂದ್ಯಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ. ಎಪ್ರಿಲ್‌ನಲ್ಲಿ ಈಕುರಿತು ಅಂತಿಮ ನಿರ್ಧಾರವಾಗಲಿದೆ.

ಕುದುರೆ ಓಟ

ಆಸ್ಟ್ರೇಲಿಯದ ಪ್ರಮುಖ ಮಾರ್ಕೆಟ್‌ಗಳಲ್ಲಿ ಕುದುರೆ ರೇಸ್‌ಗಳು ಮುಂದುವರಿದಿದೆ. ಆದರೆ ಇದಕ್ಕೆ ಪ್ರೇಕ್ಷಕರಿಲ್ಲ.

ರಗ್ಬಿ ಲೀಗ್

ವಿಶ್ವದ ಶ್ರೀಮಂತ ಸ್ಪರ್ಧೆ ಆಸ್ಟ್ರೇಲಿಯದ ನ್ಯಾಶನಲ್ ರಗ್ಬಿ ಲೀಗ್ ಖಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇದು ದೇಶದ ಪೂರ್ವ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯ ಲೀಗ್ ಆಗಿದೆ.

ಸ್ನೂಕರ್

ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ಶೀಫೀಲ್ಡ್‌ನಲ್ಲಿ ಎಪ್ರಿಲ್ 18ರಿಂದ ಮೇ 4ರ ತನಕ ನಿಗದಿಯಂತೆಯೇ ನಡೆಯುತ್ತಿದೆ.

ಮಿಕ್ಸೆಡ್ ಮಾರ್ಷಲ್ ಆರ್ಟ್ಸ್

ದಿ ಕೇಜ್ ವಾರಿಯರ್ಸ್ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ತನ್ನ ಯೋಜನೆಯಂತೆಯೇ ಮಾರ್ಚ್ 20ರಿಂದ ಆರಂಭವಾಗಲಿದ್ದು, ಸ್ಪರ್ಧೆಯ ಸ್ಥಳವನ್ನು ಲಂಡನ್‌ನಿಂದ ಮ್ಯಾಂಚೆಸ್ಟರ್‌ಗೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News