ನನ್ನ ವೃತ್ತಿಜೀವನದ ಮೇಲೆ ಬ್ಯಾನರ್ಜಿಯ ಗಾಢ ಪ್ರಭಾವವಿತ್ತು: ಸೌರವ್ ಗಂಗುಲಿ

Update: 2020-03-20 17:37 GMT

ಹೊಸದಿಲ್ಲಿ, ಮಾ.20: ಭಾರತೀಯ ಫುಟ್ಬಾಲ್ ದಂತಕತೆ ಪಿ.ಕೆ. ಬ್ಯಾನರ್ಜಿ ನಿಧನಕ್ಕೆ ಮಾಜಿ ಕ್ರಿಕೆಟಿಗ ಸೌರವ್ ಗಂಗುಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ಈ ಕುರಿತು ಟ್ವೀಟ್ ಮಾಡಿದ ಬಿಸಿಸಿಐ ಅಧ್ಯಕ್ಷ ಗಂಗುಲಿ,‘‘ನನಗೆ ಬ್ಯಾನರ್ಜಿ ಅವರ ಮೇಲೆ ಬಳಹಷ್ಟು ಪ್ರೀತಿ ಹಾಗೂ ಗೌರವವಿತ್ತು. ನಾನು 18ರ ಹರೆಯದ ಯುವಕನಾಗಿದ್ದಾಗಲೇ ಅವರು ನನ್ನ ವೃತ್ತಿಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದರು. ನಾನು ಇಂದು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಈ ವಾರ ಇಬ್ಬರು ಆತ್ಮೀಯರನ್ನು ಕಳೆದುಕೊಂಡಿದ್ದೇನೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News