ಶಾಹೀನ್ ಬಾಗ್ ಪ್ರತಿಭಟನ ಸ್ಥಳ ಸಮೀಪ ಪೆಟ್ರೋಲ್ ಬಾಂಬ್ ಎಸೆತ
Update: 2020-03-22 12:16 IST
ಹೊಸದಿಲ್ಲಿ, ಮಾ. 22: ಪೌರತ್ವ ಕಾಯ್ದೆ(ಸಿಎಎ)ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಶಾಹೀನ್‌ಬಾಗ್ ಬಳಿ ರವಿವಾರ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಶಾಹೀನ್ ಬಾಗ್ ಬಳಿ ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ಅಪರಿಚಿತ ವ್ಯಕ್ತಿ ಬೆಳಗ್ಗೆ 9:30ರ ಸುಮಾರಿಗೆ ಈ ಕೃತ್ಯ ಎಸೆಗಿದ್ದು, ಘಟನೆಯಿಂದ ಯಾರಿಗೂ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ.
ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಮೂರೂ ತಿಂಗಳುಗಳಿಂದ ಶಾಹೀನ್‌ಬಾಗ್‌ನಲ್ಲಿ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ರವಿವಾರ ಜನತಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೇವಲ ಐವರು ಮಹಿಳೆಯರು ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ಮುಂದುವರಿಸಿದ್ದರು. .