'ಹಿಂದೂಗಳಿಗೆ ಸೋಂಕು ಹರಡಲು ಮುಸ್ಲಿಮರು ಊಟದ ಬಟ್ಟಲು ನೆಕ್ಕುತ್ತಿದ್ದಾರೆ' ಎನ್ನುವ ಸುದ್ದಿ ಸುಳ್ಳು

Update: 2020-03-22 14:04 GMT

'ಸೋಂಕು ಹರಡುವುದಕ್ಕಾಗಿ ಮುಸ್ಲಿಮರು ಬಟ್ಟಲು, ಚಮಚಗಳನ್ನು ನೆಕ್ಕುತ್ತಿದ್ದಾರೆ. ಹಿಂದೂಗಳನ್ನು ಮನೆಗೆ ಕರೆಸಿ ಅದೇ ಬಟ್ಟಲುಗಳಲ್ಲಿ ಊಟ ನೀಡುತ್ತಿದ್ದಾರೆ" ..... ಇದು ಕೊರೊನಾವೈರಸ್ ಭೀತಿಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್. ಈ ಪೋಸ್ಟ್ ಜೊತೆಗಿರುವ ವಿಡಿಯೋದಲ್ಲಿ ಗುಂಪೊಂದು ಬಟ್ಟಲು, ಚಮಚಗಳನ್ನು ನೆಕ್ಕುತ್ತಿದ್ದಾರೆ. ಈ ಗುಂಪಿನಲ್ಲಿರುವವರು ಟೋಪಿಗಳನ್ನು ಧರಿಸಿದ್ದಾರೆ.

ಕೊರೊನಾ ಭೀತಿಯ ನಡುವೆ ದ್ವೇಷ ಹರಡಲು ಬಳಸಲಾಗುತ್ತಿರುವ ಪೋಸ್ಟ್ ಗಳಲ್ಲಿ ಇದೂ ಒಂದು. ಈ ವಿಡಿಯೋ 2019ರಲ್ಲೂ ವೈರಲ್ ಆಗಿತ್ತು. 'ಹಿಂದೂ ಸಹೋದರರಿಗಾಗಿ ಮುಸ್ಲಿಮರಿಂದ ವಿಶೇಷ ವ್ಯವಸ್ಥೆ' ಎಂದು ಈದ್ ಸಂದರ್ಭದಲ್ಲಿ ಈ ವಿಡಿಯೋವನ್ನು ಹರಿಯಬಿಡಲಾಗಿತ್ತು. ಹೀಗೆ ಹಲವು ಸಂದರ್ಭಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವಾಸ್ತವವೇನು?

ಸದ್ಯ ವೈರಲ್ ಆಗುತ್ತಿರುವ ವಿಡಿಯೋ ದಾವೂದಿ ಬೊಹ್ರಾ ಸಮುದಾಯದ್ದಾಗಿದೆ. ದಾವೂದಿ ಬೊಹ್ರಾ ಸಮುದಾಯದವರು ಆಹಾರವನ್ನು ವ್ಯರ್ಥ ಮಾಡುವುದಿಲ್ಲ. ಊಟ ಆದ ನಂತರವೂ ಅವರು ಬಟ್ಟಲುಗಳನ್ನು ನೆಕ್ಕುತ್ತಾ ಕನಿಷ್ಠ ಆಹಾರವೂ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಾರೆ ಮತ್ತು ಇದು ಅವರ ಸಂಪ್ರದಾಯವಾಗಿದೆ. ಗೂಗಲ್ ನಲ್ಲಿ ಈ ಬಗ್ಗೆ ಹುಡುಕಾಡಿದರೆ ಬೊಹ್ರಾ ಸಮುದಾಯದ ಈ ಸಂಪ್ರದಾಯ ಪಾಲನೆಯ ನೂರಾರು ವಿಡಿಯೋ, ಫೊಟೊಗಳು ಕಾಣಸಿಗುತ್ತವೆ ಎಂದು factcrescendo.com ವರದಿ ತಿಳಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿರುವ ಆರೋಪಕ್ಕೂ ಬೊಹ್ರಾ ಸಮುದಾಯದ ವಿಡಿಯೋಗೆ ಯಾವುದೇ ಸಂಬಂಧವಿಲ್ಲ. ಇದು ಅವರ ಸಂಪ್ರದಾಯದ ಪಾಲನೆಯೇ ಹೊರತು ಮುಸ್ಲಿಮರು ಹಿಂದೂಗಳಿಗೆ ಸೋಂಕು ಹರಡಲು ಮಾಡುತ್ತಿರುವ ಕೃತ್ಯ ಅಥವಾ ಹಿಂದೂಗಳಿಗೆ ಈದ್ ದಿನ ಎಂಜಲು ಬಟ್ಟಲಲ್ಲಿ ಊಟ ನೀಡುತ್ತಿರುವುದಲ್ಲ.

Full View

Video depicting crazy behaviors of gullible plate, bowels, spoons licking Bohrasplate-licking Bohras 2 from Asghar Vasanwala on Vimeo.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News