ಸರಕಾರ, ವಕ್ಫ್ ಇಲಾಖೆಯ ನಿರ್ದೇಶನ ಪಾಲಿಸುವಂತೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕರೆ

Update: 2020-03-23 12:35 GMT

ವಿಟ್ಲ : ಕೋವಿಡ್19 (ಕೊರೋನಾ ವೈರಸ್) ತಡೆಗಟ್ಟುವ ಸಲುವಾಗಿ ಕರ್ನಾಟಕ ಸರಕಾರ 9 ದಿನಗಳ ಕಾಲ ಕರ್ಫ್ಯೂ ವಿಧಿಸಿದೆ. ಜೊತೆಗೆ ಕರ್ನಾಟಕ ವಕ್ಫ್ ಇಲಾಖೆ 2020 ಮಾರ್ಚ್ 31ರ ತನಕ ಎಲ್ಲಾ ಮಸೀದಿ, ಮದ್ರಸ, ಯತೀಮ್ ಖಾನಾ, ದರ್ಸ್ ಮೊದಲಾದವನ್ನು ಬಂದ್ ಮಾಡಲು ನಿರ್ದೇಶಿಸಿದೆ. ಆ ಪ್ರಯುಕ್ತ ಬಂಟ್ವಾಳ ತಾಲೂಕು ವ್ಯಾಪ್ತಿಯ ಎಲ್ಲಾ ಜುಮಾ ಮಸೀದಿ, ನಮಾಝ್ ಮಸೀದಿ ಹಾಗೂ ಅದರ ಅಧೀನದ ಧಾರ್ಮಿಕ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು. ಆಝಾನ್ ಹೊರತುಪಡಿಸಿ 5 ವಕ್ತ್ ಇಮಾಮ್ ಜಮಾಅತ್ ನಮಾಝ್'ನ್ನು ನಿಲ್ಲಿಸಬೇಕು. ಮಾರ್ಚ್ 31ರ ತನಕ ಜುಮಾ ನಮಾಝನ್ನು ಕೂಡಾ ಕೈಗೊಳ್ಳಬಾರದಾಗಿಯೂ, ಈ ಮಾಹಿತಿಯನ್ನು ತಮ್ಮ ಜಮಾಅತಿನಲ್ಲಿ ಪ್ರಕಟಿಸುವಂತೆ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ತಾಲೂಕಿನ ಎಲ್ಲಾ ಮಸೀದಿ ಮತ್ತು ಮದರಸಗಳಿಗೆ ಕರೆ ನೀಡಿದೆ.

ಎಲ್ಲಾ ಮಸೀದಿ ಅಧ್ಯಕ್ಷರು, ಪದಾಧಿಕಾರಿಗಳು ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗುವ  ಮೂಲಕ ಸರಕಾರ ಹಾಗೂ ವಕ್ಫ್ ಇಲಾಖೆಯ ನಿರ್ದೇಶನಗಳನ್ನು ಪಾಲಿಸಬೇಕು ಹಾಗೂ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಸರ್ವ ರೀತಿಯ ಸಹಕಾರವನ್ನು ನೀಡುವಂತೆ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News