ಬಂದರಿನೊಳಗೆ ಜನಸಂದಣಿ ಕಡಿಮೆ ಮಾಡಲು ಸೂಚನೆ

Update: 2020-03-23 12:57 GMT

ಉಡುಪಿ, ಮಾ.23: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ಪಿಡುಗನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬಂದರಿನ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯ ಆಯೋಜಿಸಲಾಗಿತು.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಹೊರ ರಾಜ್ಯದಿಂದ ಬರುವ ಮೀನಿನ ಲಾರಿಗಳನ್ನು ಮೀನು ವ್ಯಾಪಾರಸ್ಥರೇ ಸ್ವಯಂಪ್ರೇರಿತವಾಗಿ ಬಂದರು ಪ್ರವೇಶಿ ಸದಂತೆ ನಿಲ್ಲಿಸಿದ್ದು, ಬಂದರಿನೊಳಗೆ ಜನದಟ್ಟಣೆ ಕಡಿಮೆಗೊಳಿಸಲು ಬಂದರಿನೊಳಗೆ ಚಿಲ್ಲರೆ ವ್ಯಾಪಾರವನ್ನು ಸ್ಥಗಿತಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಸಮುದ್ರದಿಂದ ಮರಳಿದ ಬೋಟುಗಳನ್ನು ಮೀನುಗಾರಿಕೆಗೆ ಮತ್ತೆ ಕಳುಹಿಸುವುದಿಲ್ಲ ಎಂದು ಮೀನುಗಾರರ ಸಂಘದವರು ತಿಳಿಸಿದ್ದಾರೆ.

ಬಂದರಿನೊಳಗೆ ಸಗಟು ವ್ಯಾಪಾರ ಎಂದಿನಂತೆಯೇ ಇರಲಿದ್ದು, ಎಲ್ಲಾ ಮೀನು ಮಾರುಕಟ್ಟೆಗಳಲ್ಲಿ ಮತ್ತು ಸ್ಥಳೀಯ ಮೀನು ಮಾರಾಟ ಗಾರರಿಂದ ಮೀನು ಮಾರಾಟ ನಿರಾತಂಕವಾಗಿ ಮುಂದುವರೆಯಲಿದೆ. ಬಂದರಿನೊಳಗೆ ಜನಸಂದಣಿ ಕಡಿಮೆಗೊಳಿಸಿ ಕರೋನ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಇಲಾಖೆ ಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News