ಕಾಸರಗೋಡು : ಒಂದೇ ದಿನ 19 ಕೊರೋನ ಸೋಂಕು ಪ್ರಕರಣಗಳು ದೃಢ

Update: 2020-03-23 13:24 GMT

ಕಾಸರಗೋಡು :  ಕಾಸರಗೋಡು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇ ದಿನೇ ಇಮ್ಮಡಿಗೊಳ್ಳುತ್ತಿದ್ದು, ಇಂದು (ಸೋಮವಾರ) 19 ಪ್ರಕರಣಗಳು ದೃಢಪಟ್ಟಿವೆ.

ಕಳೆದ ಮೂರು ದಿನಗಳಲ್ಲಿ 17 ಪ್ರಕರಣಗಳು ಪತ್ತೆಯಾದರೆ ಇಂದು ಮತ್ತೆ 19 ಪ್ರಕರಣಗಳು ದೃಢಗೊಂಡಿದ್ದು, ಇದರಿಂದ ಪ್ರಕರಣಗಳ ಸಂಖ್ಯೆ 38ಕ್ಕೇರಿದೆ.

ಕೇರಳ ರಾಜ್ಯದಲ್ಲಿ ಇಂದು 28 ಸೋಂಕು ಪ್ರಕರಣಗಳು ಖಚಿತಗೊಂಡಿದ್ದು, ಈ ಪೈಕಿ 19 ಪ್ರಕರಣಗಳು ಕಾಸರಗೋಡಿನದ್ದಾಗಿವೆ. ಕೇರಳದಲ್ಲಿ ಒಟ್ಟು 91 ಪ್ರಕರಣಗಳು ದೃಢಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News