ಕೊರೋನ ವೈರಸ್ ನಿಂದ ಭಾರತದಲ್ಲಿ 9 ಸಾವು: ಸೋಂಕಿತರ ಸಂಖ್ಯೆ 471ಕ್ಕೇರಿಕೆ
Update: 2020-03-23 22:21 IST
ಹೊಸದಿಲ್ಲಿ: ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಇಂದು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 9ಕ್ಕೇರಿದೆ. 24 ಗಂಟೆಗಳಲ್ಲಿ 75 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೊರೊನಾಪೀಡಿತರ ಸಂಖ್ಯೆ 471ಕ್ಕೇರಿದೆ.
ಇಂದು ಬೆಳಗ್ಗೆ ವ್ಯಕ್ತಿಯೊಬ್ಬರು ಬಂಗಾಳದಲ್ಲಿ ಮೃತಪಟ್ಟಿದ್ದರು. ಕೊರೋನ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.