×
Ad

ಕೊರೋನ ಪೀಡಿತ ದೇಶಗಳಿಂದ ಹಿಂತಿರುಗಿದ ಬಳಿಕ ಚಿಕಿತ್ಸೆ ನೀಡಿದ 5 ವೈದ್ಯರ ವಿರುದ್ಧ ಕ್ರಮ

Update: 2020-03-23 22:40 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.23: ಈ ತಿಂಗಳ ಆರಂಭದಲ್ಲಿ ಕೊರೋನ ವೈರಸ್ ಪೀಡಿತ ದೇಶಗಳನ್ನು ಸಂದರ್ಶಿಸಿ ವಾಪಾಸಾದ ಬಳಿಕ ಅಲ್ವಾರ್ ಹಾಗೂ ಭಿವಂಡಿಗಳ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಾವಿರಾರು ಮಂದಿಯ ಪ್ರಾಣವನ್ನು ಅಪಾಯಕ್ಕೊಡ್ಡಿದ್ದಕ್ಕಾಗಿ, ರಾಜಸ್ಥಾನದ ಐವರು ವೈದ್ಯರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

 ರಾಜ್ಯದ ಐವರು ವೈದ್ಯರುಗಳು ಕೊರೋನಾ ವೈರಸ್ ಪಿಡುಗು ವ್ಯಾಪಕವಾಗಿರುವ ದೇಶಗಳಿಂದ ಹಿಂತಿರುಗಿದ ಕೂಡಲೇ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದರು ಮತ್ತು ಶಸ್ತ್ರಕ್ರಿಯೆಗಳನ್ನು ಕೂಡಾ ನಡೆಸಿದ ಬಳಿಕ ಕೊರೋನಾ ವೈರಸ್‌ನ ಮೂರು ಪ್ರಕರಣಗಳ ಬೆಳಕಿಗೆ ಬಂದಿದ್ದವು.

 ಅಲ್ವಾರ್‌ನಲ್ಲಿ ವೈದ್ಯ ದಂಪತಿ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯಲ್ಲಿ ಎರಡು ಕೊರೋನ ವೈರಸ್ ಪ್ರಕರಣಗಳು ವರದಿಯಾಗಿವೆ. ಕೈಗಾರಿಕಾ ಪಟ್ಟಣವಾದ ಭಿವಂಡಿಯಲ್ಲಿಯೂ ವಿದೇಶದಿಂದ ಹಿಂತಿರುಗಿದ ವೈದ್ಯರು ಚಿಕಿತ್ಸೆ ನೀಡಿದ ಆಸ್ಪತ್ರೆಯಲ್ಲಿ ಇನ್ನೊಂದು ಕೊರೋನಾ ಸೋಂಕು ಪತ್ತೆಯಾಗಿತ್ತು.

ರಾಜಸ್ಥಾನ ಸರಕಾರವು ಈ ಐವರು ವೈದ್ಯರುಗಳನ್ನು ಕ್ವಾರಂಟೈನ್ (ದಿಗ್ಬಂಧನ)ನಲ್ಲಿ ಇರಿಸಿದ್ದು, ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಮಧ್ಯೆ ಶ್ರೀಗಂಗಾನಗರದಲ್ಲಿ ವಿದೇಶದಿಂದ ಮರಳಿದ್ದ ಐವರಿಗೆ ವಸತಿ ನೀಡಿದ್ದಕ್ಕಾಗಿ ಪೆಟ್ರೋಲ್ ಪಂಪ್ ಮಾಲಕರ ವಿರುದ್ಧ ಸರಕಾರವು ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News