ಗ್ರಾಮದಲ್ಲಿ‌ ಹಸಿದವರಿಗೆ ಊಟದ ವ್ಯವಸ್ಥೆ ಕಲ್ಪಿಸುತ್ತಿರುವ ಕೊಣಾಜೆ ಗ್ರಾ.ಪಂ. ಅಧ್ಯಕ್ಷ

Update: 2020-03-24 10:59 GMT

ಕೊಣಾಜೆ : ಜೆಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರು ಯಾರೂ ಹಸಿವಿನಿಂದ ಸಮಸ್ಯೆ ಎದುರಿಸಬಾರದು ಎಂಬ ಉದ್ದೇಶದಿಂದ ಗ್ರಾಮ ಪಂ. ಅಧ್ಯಕ್ಷ ನಝರ್ ಷಾ ಅವರು ಬಂದ್ ನಿಂದಾಗಿ‌ ಊಟ ಸಿಗದವರಿಗೆ ಮಾ.31ರ ವರೆಗೆ ಊಟದ ವ್ಯವಸ್ಥೆಯನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ನಝರ್ ಅವರು‌ ನನ್ನ ಗ್ರಾಮದ ಜನತೆ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದೊಂದಿಗೆ ಊಟದ ವ್ಯವಸ್ಥೆಯನ್ನು ಕಲ್ಪಸಲು ಚಿಂತಿಸಿ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿ ಬಳಿಕ ಕಾರ್ಯಪ್ರವೃತ್ತರಾಗಿದ್ದಾರೆ.

ಮಂಗಳವಾರ‌ ಮಧ್ಯಾಹ್ನ 19 ಜನರಿಗೆ ಊಟ

ವಿದ್ಯಾರ್ಥಿಗಳು, ಹೊರಜಿಲ್ಲೆಗಳಿಂದ ಬಂದ  ಬಡ‌ಕೂಲಿಕಾರ್ಮಿಕರು ಸೇರಿ‌ ಒಟ್ಟು 19 ಜನರಿಗೆ ಅನ್ನ, ಸಾಂಬಾರು, ಪಲ್ಯ, ಹಪ್ಪಲ ಸೇರಿ‌ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವಾಹನ ವ್ಯವಸ್ಥೆ ಇಲ್ಲದವರಿಗೆ ಅವರು ಇರುವಲ್ಲಿಗೆ ತಲುಪಿಸಲಾಗಿದೆ ಎಂದು ನಝರ್ ತಿಳಿಸಿದರು.

ಮನೆಯಲ್ಲೇ ಊಟ ತಯಾರಿ

ಬಂದ್ ನಿಂದಾಗಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆರಂಭಿಸಲಾಗಿರುವ ಅನ್ನ ಸೇವೆಗೆ ಈಗಾಗಲೇ ಎರಡು‌ ಕ್ವಿಂಟ್ವಾಲ್ ಅಕ್ಕಿ, ತರಕಾರಿಯನ್ನು ತಂದಿದ್ದೇನೆ. ಅಲ್ಲದೆ ಮನೆಯಲ್ಲೇ ಅಡುಗೆ ಮಾಡಲು ಪತ್ನಿ ನಝೀಮಾ ಸಾಥ್ ನೀಡುತ್ತಿದ್ದಾರೆ. ಇವತ್ತು ರಾತ್ರಿಗೂ ಹನ್ನೊಂದು ಊಟ ಬೇಕು ಎಂದು ಕೆಲವರು ಫೋನ್ ಮಾಡಿದ್ದಾರೆ. ಮಾ.31 ರವರೆಗೂ ಸೇವೆ ಮುಂದುವರಿಸುತ್ತೇನೆ.
- ನಝರ್ ಷಾ
ಕೊಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ

ಕೊಣಾಜೆ ದುರ್ಗಾ ಪ್ರೆಂಡ್ಸ್‌ ವತಿಯಿಂದಲೂ ಸೇವೆ

ಕೊಣಾಜೆಯ ದುರ್ಗಾ ಪ್ರೆಂಡ್ಸ್ ಸಂಘಟನೆ ಕೂಡ ಇದೇ ರೀತಿಯಲ್ಲಿ ಕಾರ್ಯಪ್ರವೃತ್ತವಾಗದ್ದು, ಹಸಿದವರಿಗೆ ಅನ್ನ‌ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News