ಮಂಗಳೂರಿನಲ್ಲಿ ಮತ್ತೆ 4 ಮಂದಿಗೆ ಕೊರೋನ ವೈರಸ್ ದೃಢ

Update: 2020-03-24 11:43 GMT

ಮಂಗಳೂರು, ಮಾ. 24: ಮಂಗಳೂರಿನಲ್ಲಿ ಮತ್ತೆ 4 ಮಂದಿಗೆ ಕೊರೋನ ಸೋಂಕು ದೃಢಗೊಂಡಿದೆ. ಇವರು ಕೇರಳ ರಾಜ್ಯದವರು ಎಂದು ತಿಳಿದು ಬಂದಿದೆ. ಈ ಮೂಲಕ ಮಂಗಳೂರಿನಲ್ಲಿ ಕೊರೋನ ಪೀಡಿತರ ಸಂಖ್ಯೆ 5ಕ್ಕೇರಿದೆ

ಹಾಗಾಗಿ ಮಾ.19ರಂದು ಬೆಳಗ್ಗೆ 5 ಗಂಟೆಗೆ ಐಎಕ್ಸ್ 814 ಏರ್ ಇಂಡಿಯಾ ಮತ್ತು ಮಾ. 20ರಂದು ಸಂಜೆ 5:30ಕ್ಕೆ ಎಸ್‌ಜಿ 60 ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಎಲ್ಲಾ ಪ್ರಯಾಣಿಕರು ಮತ್ತು ಅವರನ್ನು ಸಂಪರ್ಕಿಸಿದವರು 14 ದಿನಗಳ ಕಾಲ ಮನೆಯಲ್ಲೇ ನಿಗಾದಲ್ಲಿರಲು ಸೂಚಿಸಲಾಗಿದೆ.

ಸೋಂಕು ದೃಢಗೊಂಡ ನಾಲ್ಕು ಮಂದಿಯ ಪೈಕಿ ಮೂವರು ವೆನ್ಲಾಕ್ ಮತ್ತು ಓರ್ವ ವ್ಯಕ್ತಿ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News