ಇಂದಿನಿಂದ ಕರ್ಣಾಟಕ ಬ್ಯಾಂಕಿನ ಪರ್ಯಾಯ ಸೇವಾ ವಾಹಿನಿಗಳು ಉಚಿತ: ಮಹಾಬಲೇಶ್ವರ ಎಂ.ಎಸ್

Update: 2020-03-24 12:36 GMT

ಮಂಗಳೂರು :  ಕೊರೋನ ವೈರಸ್ ನಿಂದ ಉಂಟಾಗಿರುವ ಜಾಗತಿಕ ವಿಪತ್ತಿನ ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್  ತನ್ನ ಪರ್ಯಾಯ ಸೇವಾ ವಾಹಿನಿಗಳನ್ನು (Alternative Delivery Chanel) ಇಂದಿನಿಂದ ಗ್ರಾಹಕರಿಗೆ ಮುಂದಿನ ಪ್ರಕಟಣೆಯವರೆಗೆ ಉಚಿತವಾಗಿ ನೀಡಲಿದೆ.

ಗ್ರಾಹಕರು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಮನೆಯಲ್ಲಿಯೇ ಅಥವಾ ತಾವಿರುವಲ್ಲಿಯೇ ಡಿಜಿಟಲ್ ತಂತ್ರಜ್ಞಾನ ಆಧಾರಿತ ನಮ್ಮ ಸೇವಾ ವಾಹಿನಿಗಳನ್ನು ಬಳಸಿ ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಿಕೊಳ್ಳಬಹುದಾಗಿದೆ.

ನಮ್ಮ ಪರ್ಯಾಯ ಸೇವಾ ವಾಹಿನಿಗಳಾದ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎ.ಟಿ.ಎಮ್, ಎಂ.ಪಾಸ್ ಬುಕ್ ಗಳನ್ನು ಬಳಸಿ, ಆನ್ಲೈನ್ ಪೇಮೆಂಟ್ ಮೂಲಕ ನೆಫ್ಟ್ (NEFT), ಆರ್.ಟಿ.ಜಿ.ಯಸ್(RTGS)  ಮುಂತಾದ ಸೇವೆಗಳನ್ನು ಬಳಸಿಕೊಳ್ಳಬಹುದು. ಅದಲ್ಲದೆ  ಗ್ರಾಹಕರು ತಮ್ಮ ಶಾಖಾ ಭೇಟಿಯನ್ನು ಹಿತಮಿತಗೊಳಿಸಿಕೊಳ್ಳುವುದರ ಜೊತೆಗೆ ನಗದು ವ್ಯವಹಾರವನ್ನು  ಸಾಧ್ಯವಾದಷ್ಟು ಮಟ್ಟಿಗೆ ಕಡಿತಗೊಳಿಸಿ ಕೊಂಡು, ಕೊರೋನ ವೈರಸ್ ಸೋಂಕು ಹರಡದಂತೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ  ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News